Publish Date: Tue, 22 Jun 2021 (17:21 IST)
Updated Date: Tue, 22 Jun 2021 (17:22 IST)
ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆ ಟೀಂ ಇಂಡಿಯಾ ಮತ್ತೊಂದು ಆಘಾತ ನೀಡಿದೆ.
ಇಂದಿನ ದಿನದಾಟ ತಡವಾಗಿ ಆರಂಭವಾದರೂ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ನಿಧಾನಗತಿಯ ಆಟವಾಡುತ್ತಾ ಭಾರತೀಯ ಬೌಲರ್ ಗಳನ್ನು ಕಾಡಿಸುತ್ತಿದ್ದರು. ಆದರೆ ಇದೀಗ ಮೊಹಮ್ಮದ್ ಶಮಿ ಎಸೆತದಲ್ಲಿ 11 ರನ್ ಗಳಿಸಿದ ರಾಸ್ ಟೇಲರ್ ಔಟಾಗಿ ನಿರ್ಗಮಿಸಿದ್ದಾರೆ.
ಇದು ಇಂದಿನ ಊಟದ ವಿರಾಮಕ್ಕೂ ಮೊದಲು ಭಾರತ ತಂಡಕ್ಕೆ ಸಿಕ್ಕಿದ ಬಿಗ್ ಬ್ರೇಕ್. ಆದರೆ ಪ್ರಮುಖ ಬ್ಯಾಟ್ಸ್ ಮನ್ ಕೇನ್ ವಿಲಿಯಮ್ಸನ್ ಇನ್ನೂ 15 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇದೀಗ ಕಿವೀಸ್ ಸ್ಕೋರ್ 3 ವಿಕೆಟ್ ನಷ್ಟಕ್ಕೆ 123 ರನ್ ಕ್ಕೇರಿದೆ.