Publish Date: Wed, 23 Jun 2021 (16:10 IST)
Updated Date: Wed, 23 Jun 2021 (17:09 IST)
ಸೌಥಾಂಪ್ಟನ್: ರನ್ ಮೆಷಿನ್ ಎಂದೇ ಖ್ಯಾತರಾಗಿದ್ದ ವಿರಾಟ್ ಕೊಹ್ಲಿ ಇತ್ತೀಚೆಗೆ ಯಾಕೋ ದೊಡ್ಡ ಇನಿಂಗ್ಸ್ ಆಡುವುದನ್ನೇ ಮರೆತಿದ್ದಾರೆ. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಆಡುವುದನ್ನೇ ಮರೆತಿದ್ದಾರೆ.
ಅದೂ ವಿಶ್ವಕಪ್ ಗೆ ಸಮಾನವಾದ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ತಂಡಕ್ಕೆ ದೊಡ್ಡ ಮೊತ್ತದ ಜೊತೆಯಾಟ ಬೇಕಾಗಿದ್ದಾಗ ಜವಾಬ್ಧಾರಿ ಹೊತ್ತು ತಂಡವನ್ನು ಮುನ್ನಡೆಸಬೇಕಿದ್ದ ಇಬ್ಬರೂ ಕಳಪೆ ಮೊತ್ತಕ್ಕೆ ಔಟಾಗಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವರಂತೂ ಐಸಿಸಿ ಕೂಟಗಳಲ್ಲಿ ಕೊಹ್ಲಿಯ ದುರಾದೃಷ್ಟವನ್ನು ಹಳಿದಿದ್ದು, ಇನ್ನು ಮುಂದೆ ಎಲ್ಲಾ ಐಸಿಸಿ ಕೂಟದ ಫೈನಲ್ ನಲ್ಲೂ ರೋಹಿತ್ ಶರ್ಮಾ ನಾಯಕರಾಗಲಿ ಎಂದು ಜರೆದಿದ್ದಾರೆ.