Publish Date: Fri, 25 Jun 2021 (09:07 IST)
Updated Date: Fri, 25 Jun 2021 (09:09 IST)
ಮುಂಬೈ: ಐಸಿಸಿ ಕೂಟದ ಫೈನಲ್ ಎಂಬುದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಯಾಕೋ ಮರೀಚಿಕೆಯಾಗಿದೆ.
ಇದುವರೆಗೆ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಎಷ್ಟೋ ಸಾಧನೆಗಳನ್ನು ಮಾಡಿರಬಹುದು. ಆದರೆ ಯಾಕೋ ಐಸಿಸಿ ಕೂಟಗಳ ವಿಚಾರಕ್ಕೆ ಬಂದಾಗ ಕೊಹ್ಲಿಗೆ ಯಶಸ್ಸು ಸಿಕ್ಕಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲೂ ಅದೇ ದುರಾದೃಷ್ಟ ಮುಂದುವರಿದಿದೆ.
ಹೀಗಾಗಿ ಅಭಿಮಾನಿಗಳು ಕೊಹ್ಲಿ-ಕೋಚ್ ರವಿಶಾಸ್ತ್ರಿ ಜೋಡಿ ಮೇಲೆ ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಕೊಹ್ಲಿ ಒಬ್ಬ ಬ್ಯಾಟ್ಸ್ ಮನ್ ಆಗಿ ಹೇಳುವಂತೆಯೇ ಇಲ್ಲ. ಆದರೆ ನಾಯಕನಾಗಿ ಅವರ ನಿರ್ವಹಣೆ ಸಾಲದು ಎನ್ನುವುದು ಅಭಿಮಾನಿಗಳ ಅಭಿಪ್ರಾಯ.