Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್: ಗ್ರೂಪ್ ಬಿಯಲ್ಲಿ ಟೀಂ ಇಂಡಿಯಾ

ಟಿ20 ವಿಶ್ವಕಪ್: ಗ್ರೂಪ್ ಬಿಯಲ್ಲಿ ಟೀಂ ಇಂಡಿಯಾ
ದುಬೈ , ಭಾನುವಾರ, 27 ಜೂನ್ 2021 (09:10 IST)
ದುಬೈ: ಮುಂಬರುವ ಟಿ20 ವಿಶ್ವಕಪ್ ಕೂಟದಲ್ಲಿ ಆಡಲಿರುವ ತಂಡಗಳನ್ನು ವಿಂಗಡಿಸಿ ಐಸಿಸಿ ಪ್ರಕಟಣೆ ಹೊರಡಿಸಿದ್ದು, ಟೀಂ ಇಂಡಿಯಾ ಗ್ರೂಪ್ ಬಿಯಲ್ಲಿ ಸ್ಥಾನ ಪಡೆದುಕೊಂಡಿದೆ.


ಮೊದಲ ಹಂತದಲ್ಲಿ ಅರ್ಹತಾ ಸುತ್ತಿನಲ್ಲಿ ಆಡಬೇಕಾದ ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಅರ್ಹತಾ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಎ ಮತ್ತು ಬಿ ವಿಭಾಗದ ಎರಡು ತಂಡಗಳು ಮುಖ್ಯ ಹಂತಕ್ಕೆ ಆಯ್ಕೆಯಾಗಲಿವೆ. ಈ ಹಂತದಲ್ಲಿ ಶ್ರೀಲಂಕಾ, ಐರ್ಲೆಂಡ್, ಪಪುವಾ ನ್ಯೂ ಜೆನಿವಾ ಮತ್ತು ಒಮನ್ ಎ ಗುಂಪಿನಲ್ಲಿದ್ದರೆ, ಬಾಂಗ್ಲಾದೇಶ, ನಮೀಬಿಯಾ, ನೆದರ್ಲ್ಯಾಂಡ್ಸ್ ಮತ್ತು ಸ್ಕಾಟ್ ಲ್ಯಾಂಡ್ ತಂಡಗಳು ಬಿ ಗುಂಪಿನಲ್ಲಿವೆ.

ಇನ್ನು ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಕ್ರಮಾಂಕದಲ್ಲಿರುವ ಸೂಪರ್ ಟ್ವೆಲ್ವ್ ತಂಡಗಳನ್ನೂ ಇದೇ ರೀತಿ ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನವಿದೆ. ಇನ್ನು ಬಿ ಗುಂಪಿನಲ್ಲಿ ಟೀಂ ಇಂಡಿಯಾದ್ದು, ಇದರ ಜೊತೆಗೆ ಇಂಗ್ಲೆಂಡ್, ದ.ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಸೋತಿದ್ದಕ್ಕೆ ಆಸೀಸ್ ನಾಯಕನ ವ್ಯಂಗ್ಯ