Publish Date: Sat, 26 Jun 2021 (11:58 IST)
Updated Date: Sat, 26 Jun 2021 (09:35 IST)
ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಸೋತ ಬಳಿಕ ಟೀಂ ಇಂಡಿಯಾದಲ್ಲಿ ಬದಲಾವಣೆಯ ಮಾತು ಕೇಳಿಬರುತ್ತಿದೆ.
ಎಲ್ಲರಿಗಿಂತ ಹೆಚ್ಚು ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಚೇತೇಶ್ವರ ಪೂಜಾರ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಅವರ ಜೊತೆಗೆ ಅಜಿಂಕ್ಯಾ ರೆಹಾನೆ ಕೂಡಾ ರನ್ ಗಳಿಸುವುದನ್ನೇ ಮರೆತಿದ್ದಾರೆ. ಆದರೆ ಇದೀಗ ಕೊಹ್ಲಿ ಬದಲಾವಣೆಯ ಸೂಚನೆ ನೀಡಿದ್ದು, ಇಂಗ್ಲೆಂಡ್ ಸರಣಿಗೆ ಕನ್ನಡಿಗ, ಕೆಎಲ್ ರಾಹುಲ್ ಗೆ ಸ್ಥಾನ ನೀಡಿದರೂ ಅಚ್ಚರಿಯಿಲ್ಲ.
ರಾಹುಲ್ ಸೀಮಿತ ಓವರ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅವರಿಗೆ ಕೆಲವು ಸಮಯದಿಂದ ಅವಕಾಶವೇ ಸಿಕ್ಕಿರಲಿಲ್ಲ. ಇತ್ತೀಚೆಗೆ ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯದಲ್ಲೂ ಕೊಹ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ರಾಹುಲ್ ಗೆ ಅವಕಾಶ ಸಿಗುವ ಸಾಧ್ಯತೆಯಿದೆ.