Publish Date: Fri, 15 Sep 2017 (10:25 IST)
Updated Date: Fri, 15 Sep 2017 (10:28 IST)
ಮುಂಬೈ: ಟೀಂ ಇಂಡಿಯಾ ಆಟಗಾರರಿಗೆ ಎರಡು ಕ್ರಿಕೆಟ್ ಸರಣಿ ನಡುವೆ ಸ್ವಲ್ಪ ಬಿಡುವು ಕೊಡಿ ಎಂಬ ರವಿಶಾಸ್ತ್ರಿ ಬೇಡಿಕೆಗೆ ಬಿಸಿಸಿಐ ತಲೆಬಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಸರಣಿ ಮುಗಿದ ತಕ್ಷಣವೇ ಭಾರತ ದ.ಆಫ್ರಿಕಾ ಪ್ರವಾಸ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ದಿನದ ವಿರಾಮವಿಲ್ಲ. ಹಾಗಾಗಿ ಸ್ವಲ್ಪ ವಿರಾಮ ನೀಡಿ ಎಂದು ಶಾಸ್ತ್ರಿ ಬಿಸಿಸಿಐ ಆಡಳಿತ ಮಂಡಳಿ ಎದುರು ಮನವಿ ಮಾಡಿದ್ದರು.
ಈ ಮನವಿಗೆ ಸ್ಪಂದಿಸಿರುವ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ನಂತರದ ಆಫ್ರಿಕಾ ಪ್ರವಾಸಕ್ಕೆ ಬಿಡುವು ನೀಡಲು ಚಿಂತನೆ ನಡೆಸಿದೆ. ಆಫ್ರಿಕಾ ಪ್ರವಾಸದ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯವಿಲ್ಲದ ಕಾರಣ, ಟಿ20 ಪಂದ್ಯದ ವೇಳಾಪಟ್ಟಿಯನ್ನು ಪುನರ್ ಪರಿಶೀಲಿಸುವುದಾಗಿ ಬಿಸಿಸಿಐ ಹೇಳಿದೆ.