Publish Date: Sat, 19 Dec 2020 (09:04 IST)
Updated Date: Sat, 19 Dec 2020 (09:05 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ನಲ್ಲಿ ಎರಡೂ ತಂಡಗಳ ಬ್ಯಾಟ್ಸ್ ಮನ್ ಗಳು ಮತ್ತು ಬೌಲರ್ ಗಳ ನಡುವೆ ಸೈಲಂಟಾಗಿ ಕದನ ನಡೆಯುತ್ತಿದೆ.
ಮೊದಲ ದಿನದಾಟದಲ್ಲಿ ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ರನ್ ಗಳಿಸದೇ ಎದುರಾಳಿ ಬೌಲರ್ ಗಳನ್ನು ಸತಾಯಿಸಿದ್ದರು. ಅದೇ ಕೆಲಸವನ್ನು ಇದೀಗ ಆಸ್ಟ್ರೇಲಿಯಾ ಬೌಲರ್ ಗಳು ಮಾಡಿ ಸೇಡು ತೀರಿಸಿಕೊಂಡಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ಆರಂಭದ ರನ್ ತೆಗೆದುಕೊಳ್ಳಲು ಬರೋಬ್ಬರಿ 5 ಓವರ್ ತೆಗೆದುಕೊಂಡರು. ಬಳಿಕ ಬೌಂಡರಿ ಮೂಲಕ ತಂಡದ ರನ್ ಖಾತೆ ತೆರೆದರೂ ತಮ್ಮ ನಿಧಾನಗತಿಯ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಬೌಲರ್ ಗಳನ್ನು ಸತಾಯಿಸಿದರು.