Publish Date: Fri, 18 Dec 2020 (16:39 IST)
Updated Date: Fri, 18 Dec 2020 (16:40 IST)
ಅಡಿಲೇಡ್: ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯನ್ನರು ಮೊದಲ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ 191 ರನ್ ಗಳಿಗೆ ಆಲೌಟ್ ಮಾಡಿದೆ. ಇದರಿಂದಾಗಿ ಭಾರತಕ್ಕೆ ಮಹತ್ವದ 52 ರನ್ ಗಳ ಮುನ್ನಡೆ ಲಭಿಸಿದೆ.
ಭಾರತದ ಪರ ಸಂಘಟಿತ ದಾಳಿ ನಡೆಸಿದ ಬುಮ್ರಾ, ಉಮೇಶ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ಎದುರಾಳಿಗಳನ್ನು ಆರಂಭದಿಂದಲೇ ನಿಯಂತ್ರಿಸುವುದರ ಜತೆಗೆ ನಿಯಮಿತವಾಗಿ ವಿಕೆಟ್ ಕೀಳುತ್ತಾ ಸಾಗಿದರು. ಅಶ್ವಿನ್ 4 ವಿಕೆಟ್, ಉಮೇಶ್ ಯಾದವ್ 3 ಮತ್ತು ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಬಳಿಸಿದರು. ಆಸ್ಟ್ರೇಲಿಯಾ ಪರ ನಾಯಕನಾಟವಾಡಿದ ಟಿಮ್ ಪೈನ್ ಅಜೇಯ 73 ರನ್, ಲುಬುಶೇನ್ 47 ರನ್ ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ರನ್ ಬರಲಿಲ್ಲ.