Publish Date: Fri, 18 Dec 2020 (09:03 IST)
Updated Date: Fri, 18 Dec 2020 (09:05 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ರನೌಟ್ ಆದ ಬಗೆಗೆ ಮಾಜಿ ಸ್ಪಿನ್ ದಿಗ್ಗಜ ಶೇನ್ ವಾರ್ನೆ ಖೇದ ವ್ಯಕ್ತಪಡಿಸಿದ್ದಾರೆ.
ಅಜಿಂಕ್ಯಾ ರೆಹಾನೆ ಜೊತೆಗಿನ ಸಂವಹನ ಕೊರತೆಯಿಂದಾಗಿ ಕೊಹ್ಲಿ 74 ರನ್ ಗಳಿಸಿದ್ದಾಗ ದುರದೃಷ್ಟವಶಾತ್ ರನೌಟ್ ಆದರು. ಇದರ ಬಗ್ಗೆ ಟ್ವೀಟ್ ಮಾಡಿರುವ ಶೇನ್ ವಾರ್ನೆ ಕೊಹ್ಲಿ ದೊಡ್ಡ ಇನಿಂಗ್ಸ್ ನೋಡಬಹುದು ಎಂಬ ಕಾತುರದಲ್ಲಿದ್ದೆ. ಆದರೆ ಅವರು ರನೌಟ್ ಆದ ರೀತಿ ಶೇಮ್ ಶೇಮ್. ಅವರ ದೊಡ್ಡ ಇನಿಂಗ್ಸ್ ಗೆ ರನೌಟ್ ಬ್ರೇಕ್ ಹಾಕಿತು ಎಂದು ಪ್ರತಿಕ್ರಿಯಿಸಿದ್ದಾರೆ.