ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಯುಎಇ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದರೆ ಭಾರತ ಮೊದಲು ಏನು ಆಯ್ಕೆ ಮಾಡಿಕೊಳ್ಳಬೇಕು?
ಏಷ್ಯಾ ಕಪ್ ಟೂರ್ನಿ ನಿನ್ನೆಯಿಂದ ಆರಂಭವಾಗಿದ್ದು, ಇಂದು ಮೊದಲ ಪಂದ್ಯದಲ್ಲಿ ಭಾರತ ಯುಎಇ ತಂಡವನ್ನು ಎದುರಿಸಲಿದೆ. ಅತಿಥೇಯ ತಂಡವಾಗಿರುವ ಯುಎಇ ವಿರುದ್ಧ ಭಾರತ ಪ್ರಬಲ ತಂಡವೇ ಸರಿ. ಹಾಗಿದ್ದರೂ ಟಾಸ್ ಗೆದ್ದ ತಂಡ ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ.
ದುಬೈ ಮೈದಾನದಲ್ಲಿ ಟಾಸ್ ಗೆದ್ದವನೇ ಬಾಸ್. ಇಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು. ಕಳೆದ 7 ಪಂದ್ಯಗಳಲ್ಲಿ ಇಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡಕ್ಕೆ ಸೋಲಾಗಿದೆ. ಹೀಗಾಗಿ ಯಾವುದೇ ತಂಡವೂ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಇಷ್ಟಪಡುತ್ತದೆ. ನಿನ್ನೆಯ ಮೊದಲ ಪಂದ್ಯದಲ್ಲೂ ಅಫ್ಘಾನಿಸ್ತಾನ ತಂಡ ಹಾಂಗ್ ಕಾಂಗ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿದ್ದೇ ಇದಕ್ಕೆ ಸಾಕ್ಷಿ. ಹೀಗಾಗಿ ಇಂದು ಟಾಸ್ ಗೆದ್ದರೆ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದು ಸೂಕ್ತ ಆಯ್ಕೆಯಾಗಿರುತ್ತದೆ.