ನವದೆಹಲಿ: ದುಬೈನ ರಾಜಕುಮಾರಿ ಶೇಖಾ ಮಹ್ರಾ ಬಿಂತ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತನ್ನ ಆಘಾತಕಾರಿ ವಿಚ್ಛೇದನವನ್ನು ಜಗತ್ತಿಗೆ ಘೋಷಿಸಿದ ಒಂದು ವರ್ಷದ ನಂತರ ರಾಪರ್ ಫ್ರೆಂಚ್ ಮೊಂಟಾನಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮದುವೆಯ ದಿನಾಂಕವನ್ನು ಇನ್ನೂ ನಿಗದಿಪಡಿಸದಿದ್ದರೂ ಈ ಜೋಡಿ ಜೂನ್ ತಿಂಗಳಿನಲ್ಲಿ ಉಂಗುರ ಬದಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಶೇಖಾ ಮಹ್ರಾ ಅವರು ತಮ್ಮ ಮೊದಲ ಮದುವೆಯ ವಿಚ್ಛೇಧನವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಘೋಷಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದರು. ಈ ಘೋಷಣೆಯ ಒಂದು ವರ್ಷದ ನಂತರ ಈ ಪ್ರಕಟಣೆ ಹೊರ ಬಿದ್ದಿದೆ. ಮಾಂಟಾನಾ ಅವರ ಪ್ರತಿನಿಧಿಯೊಬ್ಬರು ನಿಶ್ಚಿತಾರ್ಥವನ್ನು ದೃಢಪಡಿಸಿದ್ದಾರೆ.
ಜುಲೈ 2024 ರಲ್ಲಿ ಶೇಖ್ ಮಹ್ರಾ ಅವರು ಎಮಿರಾಟಿ ಉದ್ಯಮಿ ಶೇಖ್ ಮನಾ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್ ಅವರಿಗೆ ವಿಚ್ಛೇದನವನ್ನು ಘೋಷಿಸಿದ್ದರು. "ಪ್ರಿಯ ಪತಿಯೇ, ನೀವು ಇತರರೊಂದಿಗೆ ಕಾರ್ಯನಿರತರಾಗಿರುವುದರಿಂದ, ನಾನು ವಿಚ್ಛೇದನವನ್ನು ಘೋಷಿಸುತ್ತೇನೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದು ಭಾರೀ ಸುದ್ದಿಯಾಗಿದ್ದರು.