Publish Date: Thu, 27 Nov 2025 (10:56 IST)
Updated Date: Thu, 27 Nov 2025 (10:59 IST)
ಮುಂಬೈ: ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದ ತಕ್ಷಣ ಕನ್ನಡಿಗ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಗಂಭೀರ್ ಕತೆ ಏನು?
ಗೌತಮ್ ಗಂಭೀರ್ ಟಿ20 ಕ್ರಿಕೆಟ್ ಗೆ ಉತ್ತಮ ಕೋಚ್ ಆಗಿರಬಹುದು. ಆದರೆ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಕೋಚ್ ಆಗಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ತವರಿನಲ್ಲೇ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಆಗುತ್ತಿರುವುದಕ್ಕಿಂತ ದೊಡ್ಡ ಸಾಕ್ಷಿ ಇನ್ನೇನು ಬೇಕಿದೆ?
ಗೌತಮ್ ಗಂಭೀರ್ ಆದರೂ ತಮ್ಮ ಹುಳುಕು ಒಪ್ಪಿಕೊಳ್ಳಲು ತಯಾರಿಲ್ಲ. ಇದಕ್ಕೇ ಅಭಿಮಾನಿಗಳು ಈಗ ಅನಿಲ್ ಕುಂಬ್ಳೆಯಂತೆ ಎಲ್ಲರೂ ಜಂಟಲ್ ಮ್ಯಾನ್ ಆಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗಂಭೀರ್, ನೋಡಿ ನನ್ನ ಕೋಚಿಂಗ್ ನಲ್ಲೇ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದು, ಏಷ್ಯಾ ಕಪ್ ಗೆದ್ದಿದ್ದು ಎಂಬುದನ್ನು ನೀವು ಮರೆತಿರುವಂತಿದೆ ಎಂದು ಹುಂಬತನ ತೋರಿಸಿದ್ದಾರೆ.
ಭಾರತ ತಂಡ ಇತ್ತೀಚೆಗಿನ ದಿನಗಳಲ್ಲಿ ಎಂದೂ ಇಷ್ಟೊಂದು ದಯನೀಯ ಸ್ಥಿತಿಯಲ್ಲಿರಲಿಲ್ಲ. ಅದರೆ ಅದನ್ನು ಒಪ್ಪಿಕೊಳ್ಳಲು ಗಂಭೀರ್ ತಯಾರಿಲ್ಲ. ಬದಲಾಗಿ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಭಾರತ ತಂಡ ಹಿಂದೆಂದೂ ಕಾಣದಂತಹ ಹೀನಾಯ ಸ್ಥಿತಿಯಲ್ಲಿದ್ದರೂ ತಮ್ಮ ಒಣ ಪ್ರತಿಷ್ಠೆಯನ್ನು ಬಿಡದ ಗಂಭೀರ್ ಗೆ ಈಗ ಅಭಿಮಾನಿಗಳೇ ಹಿಡಿಶಾಪ ಹಾಕುತ್ತಿದ್ದಾರೆ.