Select Your Language

Notifications

webdunia
webdunia
webdunia
webdunia

ಮಗಳು ವಮಿಕಾ ತಂದೆ ಕೊಹ್ಲಿಯಂತೆ, ಮಗ ಅಕಾಯ್ ಅಮ್ಮ ಅನುಷ್ಕಾ: ಭಾರತಕ್ಕೆ ಬಂದ ವಿರಾಟ್ ಪುತ್ರ

Anushka Sharma

Krishnaveni K

ಮುಂಬೈ , ಬುಧವಾರ, 17 ಏಪ್ರಿಲ್ 2024 (09:45 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಗ ಅಕಾಯ್ ಅಮ್ಮನ ಜೊತೆಗೆ ಭಾರತಕ್ಕೆ ಬಂದಿಳಿದಿದ್ದಾನೆ. ಆತನನ್ನು ವಿಮಾನ ನಿಲ್ದಾಣದಲ್ಲಿ ನೋಡಿದ ಪಪ್ಪಾರಾಜಿಗಳು ಥೇಟ್ ಅಮ್ಮ ಅನುಷ್ಕಾಳಂತೆಯೇ ಇದ್ದಾನೆ ಎಂದು ಬಣ್ಣಿಸಿದ್ದಾರೆ.

ವಿರಾಟ್ ದಂಪತಿ ತಮ್ಮ ಮಕ್ಕಳ ವಿಚಾರದಲ್ಲಿ ಗೌಪ್ಯತೆ ಕಾಪಾಡುತ್ತಿದ್ದಾರೆ. ಇದುವರೆಗೆ ಕೊಹ್ಲಿ ದಂಪತಿ ತಮ್ಮ ಮಗಳ ಫೋಟೋವನ್ನು ತೆಗೆಯಲು ಪಪ್ಪಾರಾಜಿಗಳಿಗೆ ಬಿಟ್ಟಿಲ್ಲ. ಇಬ್ಬರೂ ಇದುವರೆಗೆ ಆಕೆಯ ಮುಖವನ್ನು ರಿವೀಲ್ ಮಾಡಿಲ್ಲ. ಹಾಗಿದ್ದರೂ ಒಮ್ಮೆ ಅನುಷ್ಕಾ ಜೊತೆ ವಮಿಕಾ ಮೈದಾನಕ್ಕೆ ತಂದೆಯ ಪಂದ್ಯ ನೋಡಲು ಬಂದಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಳು. ತಕ್ಷಣವೇ ಕೊಹ್ಲಿ ದಂಪತಿ ಮಗಳ ಫೋಟೋವನ್ನು ಎಲ್ಲಾ ಕಡೆ ಡಿಲೀಟ್ ಮಾಡಬೇಕೆಂದು ಮಾಧ್ಯಮಗಳಿಗೆ ಸೂಚಿಸಿದ್ದರು.

ಏರ್ ಪೋರ್ಟ್ ನಲ್ಲಿ ಸಿಕ್ಕಾಗಲೂ ಕೊಹ್ಲಿ ದಂಪತಿ ಮಗಳ ಫೋಟೋ ತೆಗೆಯಬೇಡಿ ಎಂದು ಪಪ್ಪಾರಾಜಿಗಳಿಗೆ ಮೊದಲೇ ಸೂಚನೆ ಕೊಡುತ್ತಾರೆ. ಈಗ ಮಗ ಅಕಾಯ್ ವಿಚಾರದಲ್ಲೂ ಕೊಹ್ಲಿ ದಂಪತಿ ಅದೇ ನಿಯಮ ಪಾಲಿಸುತ್ತಿದ್ದಾರೆ. ಫೆಬ್ರವರಿ 15 ರಂದು ವಿರಾಟ್ ದಂಪತಿಗೆ ಗಂಡು ಮಗುವಾಗಿತ್ತು. ಅಕಾಯ್ ಕೊಹ್ಲಿ ಲಂಡನ್ ನಲ್ಲಿ ಜನಿಸಿದ್ದ.

ಈಗಷ್ಟೇ ಅನುಷ್ಕಾ ಮಗನ ಜೊತೆ ಭಾರತಕ್ಕೆ ವಾಪಸ್ ಆಗಿದ್ದಾರೆ. ಅಚಾನಕ್ ಆಗಿ ಪಪ್ಪಾರಾಜಿಗಳಿಗೆ ಅನುಷ್ಕಾ ಮತ್ತು ಮಕ್ಕಳು ಸಿಕ್ಕಿದ್ದಾರೆ. ಆದರೆ ಅನುಷ್ಕಾ ಮಗಳಂತೇ ಮಗನ ಫೋಟೋವನ್ನೂ ತೆಗೆಯಬೇಡಿ ಎಂದು ಮೊದಲೇ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಪಪ್ಪಾರಾಜಿಗಳು ಫೋಟೋ ತೆಗೆದಿಲ್ಲ.

ಆದರೆ ಪಪ್ಪಾರಾಜಿಗಳತ್ತ ನಗು ನಗುತ್ತಲೇ ಕೈ ಬೀಸಿದ ಅನುಷ್ಕಾ ಅವರಿಗೆ ಮಗನ ಮುಖವನ್ನು ತೋರಿಸಿದ್ದಾರಂತೆ. ಕೊಹ್ಲಿ ಪುತ್ರನನ್ನು ನೋಡಿದ ಪಪ್ಪಾರಾಜಿಯೊಬ್ಬರು ಆತ ಥೇಟ್ ಅಮ್ಮನ ಝೆರಾಕ್ಸ್ ಕಾಪಿ ಎಂದಿದ್ದಾರೆ. ಅನುಷ್ಕಾ ಈಗಷ್ಟೇ ಭಾರತಕ್ಕೆ ಮರಳಿದ್ದು, ಸದ್ಯದಲ್ಲೇ ಪತಿ ಕೊಹ್ಲಿಗಾಗಿ ಮೈದಾನದಲ್ಲಿ ಚಿಯರ್ ಅಪ್ ಮಾಡುವುದನ್ನು ನೋಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಜೋಸ್ ಬಟ್ಲರ್ ನಿಂದ ನಂಬಲಸಾಧ್ಯ ಗೆಲುವು ದಾಖಲಿಸಿದ ರಾಜಸ್ಥಾನ್ ರಾಯಲ್ಸ್