Select Your Language

Notifications

webdunia
webdunia
webdunia
webdunia

ಪುತ್ರನ ಜನನದ ಬಳಿಕ ವಿರಾಟ್ ಕೊಹ್ಲಿ ವಯಸ್ಸಾಯ್ತು!

Virat Kohli
Photo Courtesy: Twitter
ಮುಂಬೈ: ಪುತ್ರ ಅಕಾಯ್ ಜನನದ ಬಳಿಕ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಪತ್ನಿ ಅನುಷ್ಕಾ ಶರ್ಮಾ ಹೆರಿಗೆ ನಿಮಿತ್ತ ಕೊಹ್ಲಿ ಇದುವರೆಗೆ ಲಂಡನ್ ನಲ್ಲಿದ್ದರು. ಇದರ ನಡುವೆ ಒಮ್ಮೆ ಕೊಹ್ಲಿ ಮತ್ತು ಪುತ್ರಿ ವಮಿಕಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇದೀಗ ಕೊಹ್ಲಿ ಭಾರತಕ್ಕೆ ಮರಳಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಮಾರ್ಚ್ 22 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ ಸಿಬಿ ನಡುವೆ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾಗಿಯಾಗಲು ಕೊಹ್ಲಿ ವಿಮಾನವೇರಿದ್ದಾರೆ. ಈ ವೇಳೆ ಅವರನ್ನು ನೋಡಿ ಎಲ್ಲರಿಗೂ ಅಚ್ಚರಿಯಾಗಿದೆ. ಕೊಹ್ಲಿಯ ಗಡ್ಡ ಬಿಳಿಯಾಗಿದ್ದು, ನಮ್ಮ ಕಿಂಗ್ ಗೆ ವಯಸ್ಸಾಯ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು ಬಿಳಿ ಗಡ್ಡ ನೋಡಿ ‘ಅಕಾಯ್ ನ ಅಪ್ಪ’ ಎಂದು ತಮಾಷೆ ಮಾಡಿದ್ದಾರೆ. ಇದು ಫ್ಯಾಶನ್ ಗಾಗಿ ಹಾಗೆ ಬಿಟ್ಟುಕೊಂಡಿರುವುದೋ, ಗಡ್ಡಕ್ಕೆ ಬಣ್ಣ ಹಚ್ಚುವಷ್ಟೂ ಕೊಹ್ಲಿಗೆ ಪುರುಸೊತ್ತಿಲ್ಲದಾಗಿದೆಯೇ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ. ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ ಫೈನಲ್: ಆರ್ ಸಿಬಿ, ಕನ್ನಡತಿ ಶ್ರೇ ಯಾಂಕ ಪಾಟೀಲ್ ಗೆ ಸಿಕ್ಕ ಬಹುಮಾನ ಮೊತ್ತ