Publish Date: Mon, 26 Feb 2024 (15:05 IST)
Updated Date: Mon, 26 Feb 2024 (15:09 IST)
ರಾಂಚಿ: ಪುತ್ರನ ಜನನದ ಖುಷಿಯಲ್ಲಿರುವ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ಕ್ರಿಕೆಟ್ ನಿಂದ ಸಂಪೂರ್ಣ ದೂರವಿದ್ದಾರೆ ಎಂದು ಅಭಿಮಾನಿಗಳು ಬೇಸರದಲ್ಲಿದ್ದಾರೆ.
ಆದರೆ ಇದೀಗ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಬಳಿಕ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಪ್ರಕಟಿಸಿದ್ದು, ಇದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವ ಕೊಹ್ಲಿಯ ಈ ಸಂದೇಶ ಅಭಿಮಾನಿಗಳಿಗೆ ಖುಷಿ ನೀಡಿದೆ.
ಹೌದು.. ನಮ್ಮ ಯುವ ತಂಡದ ಅದ್ಭುತ ಸರಣಿ ಗೆಲುವು ಇದು. ಯುವ ಕ್ರಿಕೆಟಿಗರು ಧೈರ್ಯ, ಬಧ‍್ಥತೆ ಮತ್ತು ಮಾನಸಿಕ ಸ್ಥೈರ್ಯ ತೋರಿದರು ಎಂದು ಕೊಹ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಕೊಹ್ಲಿ ಇಂತಹದ್ದೊಂದು ಸಂದೇಶ ಹಾಕುತ್ತಿದ್ದಂತೇ ಕಾಮೆಂಟ್ ಮಾಡಿರುವ ನೆಟ್ಟಿಗರು ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಯಾವಾಗ ವಾಪಸ್ ಬರ್ತೀರಿ ಎಂದು ಕೇಳುತ್ತಿದ್ದಾರೆ.
ಪತ್ನಿ ಅನುಷ್ಕಾ ಶರ್ಮಾ ಹೆರಿಗೆಯ ನಿಮಿತ್ತ ಕೊಹ್ಲಿ ಕಳೆದ ಕೆಲವು ದಿನಗಳಿಂದ ಲಂಡನ್ ನಲ್ಲಿದ್ದಾರೆ. ಪುತ್ರ ಅಕಾಯ್ ಜನನದ ವೇಳೆ ಪತ್ನಿಯ ಜೊತೆಗಿರಲು ಕೊಹ್ಲಿ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರನ್ನು ತಂಡದಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲಿದ್ದರೆ ಎಕ್ಸ್ ಟ್ರಾ ಮನರಂಜನೆ ಇರುತ್ತದೆ. ಆದರೆ ಅವರಿಲ್ಲದೇ ಮನರಂಜನೆ ಮಿಸ್ ಮಾಡಿಕೊಳ‍್ಳುತ್ತಿದ್ದೇವೆ ಎಂದಿದ್ದಾರೆ.