Select Your Language

Notifications

webdunia
webdunia
webdunia
webdunia

IND vs ENG: ಎಚ್ಚರಿಕೆಯಿಂದ ಗೆಲುವಿನ ಕಡೆಗೆ ಟೀಂ ಇಂಡಿಯಾ ನಡಿಗೆ

Rohit Sharma

Krishnaveni K

ರಾಂಚಿ , ಸೋಮವಾರ, 26 ಫೆಬ್ರವರಿ 2024 (12:06 IST)
Photo Courtesy: Twitter
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಗುರಿ ಬೆನ್ನತ್ತಿ ಎಚ್ಚರಿಕೆಯ ಆಟವಾಡುತ್ತಿದ್ದು, ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿದೆ.

192 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ನಿನ್ನೆಯ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 40 ರನ್ ಗಳಿಸಿತ್ತು. ಇಂದು ಮೊದಲು ಇನ್ ಫಾರ್ಮ್ ಬ್ಯಾಟಿಗ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಜೈಸ್ವಾಲ್ 37 ರನ್ ಗಳಿಸಿದ್ದಾಗ ಜೋ ರೂಟ್ ಗೆ ವಿಕೆಟ್ ನೀಡಿದರು.

ಆದರೆ ಇನ್ನೊಂದೆಡೆ ಗಟ್ಟಿಯಾಗಿ ನಿಂತು ಆಡುತ್ತಿದ್ದ ನಾಯಕ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದರು. ಆದರೆ 55 ರನ್ ಗಳಿಸಿದ್ದಾಗ ಟಾಮ್ ಹಾರ್ಟ್ಲೀ ಬೌಲಿಂಗ್ ನಲ್ಲಿ ಔಟಾದರು. ನಂತರ ಬಂದ ರಜತ್ ಪಾಟೀದಾರ್ ಮತ್ತೊಮ್ಮೆ ಫ್ಲಾಪ್ ಶೋ ಮುಂದುವರಿಸಿದರು. ಅವರು ಮತ್ತೆ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ ಇನ್ನೊಂದೆಡೆ ಎಚ್ಚರಿಕೆಯಿಂದ ಆಡುತ್ತಿರುವ ಶುಬ್ಮನ್ ಗಿಲ್ 62 ಎಸೆತ ಎದುರಿಸಿ 18 ರನ್ ಗಳಿಸಿದ್ದು, ಅವರಿಗೆ ಸಾಥ್ ನೀಡುತ್ತಿರುವ ರವೀಂದ್ರ ಜಡೇಜಾ 29 ಎಸೆತಗಳಿಂದ 3 ರನ್ ಗಳಿಸಿದ್ದಾರೆ.

ಭಾರತ ಇಂದು ರೋಹಿತ್ ವಿಕೆಟ್ ಬಿದ್ದ ನಂತರ ನಿಧಾನಗತಿಯ ಆಟಕ್ಕೆ ಕೈ ಹಾಕಿದೆ. ಒಂದೆಡೆ ರಜತ್ ಕೂಡಾ ಔಟಾಗಿ ಕೊಂಚ ಕುಸಿತ ಅನುಭವಿಸಿತು. ಜೊತೆಗೆ ಪಿಚ್ ಕೂಡಾ ಬೌಲಿಂಗ್ ಗೆ ಸಹಕರಿಸುತ್ತಿರುವುದರಿಂದ ಭಾರತೀಯ ಬ್ಯಾಟಿಗರು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ಇನ್ನೂ ಗೆಲುವಿಗಾಗಿ 74 ರನ್ ಗಳಿಸಬೇಕಿದೆ. ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲೀ, ಜೋ ರೂಟ್ ಮತ್ತು ಶೊಯೇಬ್ ಬಾಶಿರ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಪುತ್ರ ಅಕಾಯ್ ಗೆ ಸ್ವಾಗತ ಕೋರಿದ ಆರ್ ಸಿಬಿ ಫ್ಯಾನ್ಸ್