Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಪುತ್ರನಿಗೆ ಸಚಿನ್ ತೆಂಡುಲ್ಕರ್ ಕೊಟ್ಟ ಕ್ಯೂಟ್ ಹೆಸರೇನು ನೋಡಿ

Virat Kohli-Sachin Tendulkar

Krishnaveni K

ಮುಂಬೈ , ಬುಧವಾರ, 21 ಫೆಬ್ರವರಿ 2024 (12:02 IST)
Photo Courtesy: Twitter
ಮುಂಬೈ: ನಿನ್ನೆಯಷ್ಟೇ ಗಂಡು ಮಗುವಿನ ಜನನದ ಖುಷಿ ಸುದ್ದಿ ಹಂಚಿಕೊಂಡ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅಭಿನಂದನೆ ಸಲ್ಲಿಸಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ಅನುಷ್ಕಾ ಮತ್ತು ವಿರಾಟ್ ಕೊಹ್ಲಿಗೆ ಸಚಿನ್ ಶುಭಾಶಯ ಸಂದೇಶ ಬರೆದಿದ್ದಾರೆ. ಜೊತೆಗೆ ವಿರಾಟ್ ಪುತ್ರ ಅಕಾಯ್ ನನ್ನು ‘ಲಿಟಲ್ ಚಾಂಪ್’ ಎಂದು ಪ್ರೀತಿಯಿಂದ ಕರೆದಿದ್ದಾರೆ. ಜೊತೆಗೆ ಪುಟಾಣಿ ಅಕಾಯ್ ಗೆ ಈ ಜಗತ್ತಿಗೆ ನಿನಗೆ ಸ್ವಾಗತ ಎಂದು ಹಾರೈಸಿದ್ದಾರೆ.

ಸಚಿನ್ ತೆಂಡುಲ್ಕರ್ ಎಂದರೆ ವಿರಾಟ್ ಕೊಹ್ಲಿಗೆ ಎಷ್ಟು ಗೌರವ ಎಂದು ಎಲ್ಲರಿಗೂ ಗೊತ್ತು. ಸಚಿನ್ ನನ್ನ ಆರಾಧ್ಯದೈವ ಎಂದು ವಿರಾಟ್ ಆಗಾಗ ಹೇಳುತ್ತಿರುತ್ತಾರೆ. ಇತ್ತೀಚೆಗೆ ವಿಶ್ವಕಪ್ ಸಂದರ್ಭದಲ್ಲಿಯೂ ವಿರಾಟ್ 50 ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ಬಳಿಕ ತಲೆಬಾಗಿ ನಮಸ್ಕರಿಸುವ ಮೂಲಕ ತಮ್ಮ ಆರಾಧ‍್ಯ ದೈವಕ್ಕೆ ವಂದನೆ ಸಲ್ಲಿಸಿದ್ದರು. ಸಚಿನ್ ಕೂಡಾ ವಿರಾಟ್ ಗೆ ತಮ್ಮ ಕೊನೆಯ ಪಂದ್ಯದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು.

ಇದೀಗ ವಿರಾಟ್ ಗೆ ಪುತ್ರನ ಜನನವಾಗಿರುವ ಸುದ್ದಿ ಕೇಳಿ ಖುಷಿ ವ್ಯಕ್ತಪಡಿಸಿರುವ ಸಚಿನ್ ‘ಅಕಾಯ್ ನನ್ನು ಬರಮಾಡಿಕೊಂಡಿರುವ ವಿರಾಟ್, ಅನುಷ್ಕಾಗೆ ಅಭಿನಂದನೆಗಳು. ನಿಮ್ಮ ಸುಂದರ ಕುಟುಂಬಕ್ಕೆ ಮತ್ತೊಬ್ಬರ ಆಗಮನವಾದಂತಾಗಿದೆ. ಅವನ ಹೆಸರಿನಂತೇ ನಿಮ್ಮ ಜೀವನವೂ ಆತನಿಂದ ಬೆಳಕಾಗಲಿ. ಈ ಗಳಿಗೆ ನಿಮ್ಮ ಜೀವನದಲ್ಲಿ ಎಂದೆಂದಿಗೂ ಮರೆಯಲಾಗದ ಗಳಿಗೆಯಾಗಲಿ. ಲಿಟಲ್ ಚಾಂಪ್ ನಿನಗೆ ಈ ಜಗತ್ತಿಗೆ ಸ್ವಾಗತ’ ಎಂದು ಸಂದೇಶ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಲ್ಲಿ ಶೊಯೇಬ್ ಮಲಿಕ್ ಪತ್ನಿ ಸನಾ ಜಾವೇದ್ ನೋಡಿ ಸಾನಿಯಾ ಎಂದು ಕೂಗಿದ ಪ್ರೇಕ್ಷಕರು