ಮುಂಬೈ: ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾದ ಟಿ20 ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ರೆಹಾನೆ ಮುನ್ನಡೆಸಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಆಡುತ್ತಿಲ್ಲ. ಹೀಗಾಗಿ ರೆಹಾನೆಗೆ ತಂಡದ ನಾಯಕತ್ವ ನೀಡಲಾಗಿದೆ.
ಎರಡನೇ ಟೆಸ್ಟ್ ವೇಳೆಗೆ ಕೊಹ್ಲಿ ವಾಪಸಾಗುವ ನಿರೀಕ್ಷೆಯಿದ್ದು, ಅವರೇ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್ವಾಲ್-ಗಿಲ್ ಆರಂಭಿಕರಾಗುವ ಸಾಧ್ಯತೆಯಿದೆ.