Select Your Language

Notifications

webdunia
webdunia
webdunia
webdunia

ಕೊರೋನಾ ಲಸಿಕೆ ಪಡೆದರೆ ಮಾತ್ರ ಭಾರತ-ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಟಿಕೆಟ್!

ಕೊರೋನಾ ಲಸಿಕೆ ಪಡೆದರೆ ಮಾತ್ರ ಭಾರತ-ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಟಿಕೆಟ್!
ಮುಂಬೈ , ಗುರುವಾರ, 11 ನವೆಂಬರ್ 2021 (09:30 IST)
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನವಂಬರ್ 17 ರಿಂದ ಆರಂಭವಾಗಲಿರುವ ಟಿ20 ಪಂದ್ಯಕ್ಕೆ ಕೊರೋನಾ ಲಸಿಕೆ ಪಡೆದವರಿಗೆ ಮಾತ್ರ ಟಿಕೆಟ್ ಸಿಗಲಿದೆ.

ಮೊದಲ ಪಂದ್ಯ ಜೈಪುರದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಮೈದಾನಕ್ಕೆ ಪ್ರವೇಶಿಸಬೇಕಾದರೆ ಕನಿಷ್ಠ ಒಂದು ಕೊರೋನಾ ಲಸಿಕೆ ಪಡೆದುಕೊಂಡಿರಬೇಕು ಎಂದು ರಾಜಸ್ಥಾನ್ ಕ್ರಿಕೆಟ್ ಸಂಸ್ಥೆ ಸೂಚನೆ ನೀಡಿದೆ.

ಬುಧವಾರ ನಡೆಯಲಿರುವ ಪಂದ್ಯಕ್ಕೆ ಈಗಾಗಲೇ ಟಿಕೆಟ್ ಗೆ ಭಾರೀ ಬೇಡಿಕೆ ಬಂದಿದೆ. ಬಹಳ ದಿನಗಳ ಬಳಿಕ ಭಾರತದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಕಾರಣಕ್ಕೆ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಫೈನಲ್ ಗೆ ನ್ಯೂಜಿಲೆಂಡ್