Publish Date: Thu, 11 Nov 2021 (12:13 IST)
Updated Date: Thu, 11 Nov 2021 (09:15 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಐಪಿಎಲ್ ನಲ್ಲಿ ಮಿಂಚಿದ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ.
ಹರ್ಷಲ್ ಪಟೇಲ್, ಆವೇಶ್ ಖಾನ್, ಋತುರಾಜ್ ಗಾಯಕ್ ವಾಡ್ ಕಳೆದ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದೀಗ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ತಾಳ್ಮೆಯ ವ್ಯಕ್ತಿತ್ವ ಹೊಂದಿರುವ ರೋಹಿತ್ ಶರ್ಮಾಗೆ ಈ ಯುವ ಪಡೆಯನ್ನು ಮುನ್ನಡೆಸುವ ಹೊಣೆಯಾದರೆ ನೂತನ ಕೋಚ್ ರಾಹುಲ್ ದ್ರಾವಿಡ್ ಗೆ ಭವಿಷ್ಯದ ತಂಡ ತಯಾರು ಮಾಡುವ ಜವಾಬ್ಧಾರಿ.
ದ್ರಾವಿಡ್ ಎ ತಂಡದ ಕೋಚ್ ಆಗಿದ್ದಾಗ ಇಂತಹ ಯುವ ಆಟಗಾರರನ್ನು ತಯಾರು ಮಾಡಿ ಟೀಂ ಇಂಡಿಯಾಕ್ಕೆ ನೀಡಿದ್ದರು. ಇದೀಗ ಮತ್ತೆ ದ್ರಾವಿಡ್ ಅದೇ ಕೆಲಸವನ್ನು ಮಾಡಬೇಕಿದೆ.