Publish Date: Fri, 12 Nov 2021 (11:30 IST)
Updated Date: Fri, 12 Nov 2021 (08:50 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಸರಣಿಗೂ ಶಿಖರ್ ಧವನ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಮೂಲಕ ಕಿರು ಮಾದರಿ ಕ್ರಿಕೆಟ್ ನಲ್ಲಿ ಗಬ್ಬರ್ ಸಿಂಗ್ ಗೇಟ್ ಪಾಸ್ ನೀಡಲಾಗಿದೆಯೇ ಎಂಬ ಅನುಮಾನ ಮೂಡಿದೆ.
ವಿಶ್ವಕಪ್ ತಂಡದಲ್ಲೂ ಧವನ್ ಗೆ ಸ್ಥಾನ ನೀಡಲಿಲ್ಲ. ಟೆಸ್ಟ್ ತಂಡದಿಂದ ಅಂತೂ ಧವನ್ ಎಂದೋ ಹೊರಬಿದ್ದಾಗಿದೆ. ಸದ್ಯಕ್ಕೆ ಅವರಿಗೆ ಏಕದಿನ ತಂಡದಲ್ಲಿ ಮಾತ್ರ ಖಾಯಂ ಸ್ಥಾನ ಸಿಗುತ್ತಿದೆ. ಇದು ಧವನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಹೊಡೆಬಡಿಯ ಆಟಗಾರ ಧವನ್ ರನ್ನು ಪದೇ ಪದೇ ಟಿ20 ಕ್ರಿಕೆಟ್ ನಲ್ಲಿ ಕಡೆಗಣಿಸುತ್ತಿರುವುದೇಕೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಐಪಿಎಲ್ ನಲ್ಲೂ ಧವನ್ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ಟಾಪ್ ನಲ್ಲಿದ್ದಾರೆ. ಹಾಗಿರುವಾಗ ಅವರಲ್ಲಿ ಇನ್ನೂ ಟಿ20 ಆಡುವ ಕ್ಷಮತೆಯಿದೆ ಎಂದೇ ಅರ್ಥ. ಹಾಗಿದ್ದರೂ ಅವರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.