Select Your Language

Notifications

webdunia
webdunia
webdunia
webdunia

ರೋಹಿತ್-ರೆಹಾನೆ ನಡುವೆ ನ್ಯೂಜಿಲೆಂಡ್ ಟೆಸ್ಟ್ ಸರಣಿ ನಾಯಕತ್ವದ ಪೈಪೋಟಿ

ರೋಹಿತ್-ರೆಹಾನೆ ನಡುವೆ ನ್ಯೂಜಿಲೆಂಡ್ ಟೆಸ್ಟ್ ಸರಣಿ ನಾಯಕತ್ವದ ಪೈಪೋಟಿ
ಮುಂಬೈ , ಶುಕ್ರವಾರ, 12 ನವೆಂಬರ್ 2021 (07:32 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರ್ ಗಳ ಪಂದ್ಯಗಳ ಬಳಿಕ ಟೆಸ್ಟ್ ಸರಣಿ ನಡೆಯಲಿದ್ದು, ಈ ಸರಣಿಗೆ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

ಹೀಗಾಗಿ ಕೊಹ್ಲಿ ಸ್ಥಾನದಲ್ಲಿ ತಂಡವನ್ನು ಮುನ್ನಡೆಸುವರು ಯಾರು ಎಂಬ ಪ್ರಶ್ನೆ ಬಂದಿದೆ. ಟಿ20 ನಾಯಕತ್ವ ರೋಹಿತ್ ಶರ್ಮಾ ಪಾಲಾಗಿದೆ. ಹೀಗಾಗಿ ಟೆಸ್ಟ್ ತಂಡವನ್ನೂ ಅವರೇ ಮುನ್ನಡೆಸುತ್ತಾರಾ ಅಥವಾ ಉಪನಾಯಕ ಅಜಿಂಕ್ಯಾ ರೆಹಾನೆ ಮತ್ತೆ ನಾಯಕತ್ವದ ಹೊಣೆ ಹೊರಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಸಾಮಾನ್ಯವಾಗಿ ಕೊಹ್ಲಿ ಅನುಪಸ್ಥಿತಿಯಲ್ಲಿ ರೆಹಾನೆ ಟೆಸ್ಟ್ ನಲ್ಲಿ ತಂಡದ ನಾಯಕತ್ವ ವಹಿಸುತ್ತಾರೆ. ಆದರೆ ಇದೀಗ ಟಿ20 ನಾಯಕ ರೋಹಿತ್ ಶರ್ಮಾ ಇರುವಾಗ ಅವರೂ ಸ್ಪರ್ಧೆಯಲ್ಲಿದ್ದಾರೆ. ಆದರೆ ರೆಹಾನೆಗೆ ಹೋಲಿಸಿದರೆ ರೋಹಿತ್ ಗೆ ಟೆಸ್ಟ್ ತಂಡಗಳಲ್ಲಿ ತಂಡ ಮುನ್ನಡೆಸಿದ ಅನುಭವವಿಲ್ಲ. ಹೀಗಾಗಿ ಟೆಸ್ಟ್ ತಂಡಕ್ಕೆ ಯಾರು ನಾಯಕರಾಗಬಹುದು ಎಂಬ ಪ್ರಶ್ನೆ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಸೆಮಿಫೈನಲ್ ಗೆ ಮುನ್ನ ಪಾಕ್ ಆಟಗಾರರಿಗೆ ಜ್ವರ ತಂದ ಆತಂಕ