Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯ ಫಿಟ್ ನೆಸ್ ಗೇ ಟಾಂಗ್ ಕೊಟ್ಟರಾ ಈ ಕ್ರಿಕೆಟಿಗ?!

ವಿರಾಟ್ ಕೊಹ್ಲಿಯ ಫಿಟ್ ನೆಸ್ ಗೇ ಟಾಂಗ್ ಕೊಟ್ಟರಾ ಈ ಕ್ರಿಕೆಟಿಗ?!
ನವದೆಹಲಿ , ಶುಕ್ರವಾರ, 4 ಮೇ 2018 (09:12 IST)
ನವದೆಹಲಿ: ವಿರಾಟ್ ಕೊಹ್ಲಿಗಿಂತಲೂ ಬೃಹತ್ ಸಿಕ್ಸರ್ ಸಿಡಿಸಲು ಸಾಧ್ಯವಾಗುವಾಗ ಅವರಂತೆ ಫಿಟ್ ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯ ಏನಿದೆ ಎಂದು ಆಫ್ಘಾನಿಸ್ತಾನ್ ಮೂಲದ ಕ್ರಿಕೆಟಿಗ ಮೊಹಮ್ಮದ್ ಶಹಜಾದ್ ಹೇಳಿಕೊಂಡಿದ್ದಾರೆ.

ಈ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಯಟ್ ಗೆ ಟಾಂಗ್ ಕೊಟ್ಟಿದ್ದಾರೆ. 90 ಕೆಜಿ ತೂಕದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಶಹಜಾದ್ ತಮಗೆ ಡಯಟ್ ನ ಅಗತ್ಯವಿಲ್ಲ ಎಂದಿದ್ದಾರೆ.

ತಮ್ಮ ದೇಹ ತೂಕದ ಬಗ್ಗೆ ಆಗಾಗ ಟೀಕೆ ಮಾಡುವವರಿಗೆ ತಿರುಗೇಟು ಕೊಟ್ಟ ಶಹಜಾದ್ ನಾನು ಡಯಟ್ ಕೂಡಾ ಮಾಡುತ್ತೇನೆ, ಹಾಗೇ ಆಹಾರವನ್ನೂ ಸಂಪೂರ್ಣವಾಗಿ ಸೇವಿಸುತ್ತೇನೆ. 50 ಓವರ್ ಗಳವರೆಗೆ ನನಗೆ ಆಡುವ ಸಾಮರ್ಥ್ಯವಿರುವಾಗ ಅನಗತ್ಯವಾಗಿ ಫುಡ್ ಕಂಟ್ರೋಲ್ ಮಾಡುವುದರ ಬಗ್ಗೆ ಯಾಕೆ ಯೋಚಿಸಲಿ?’ ಎಂದು ಶಹಜಾದ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಹಿಂಬಾಲಿಸುತ್ತಿವೆ ಈ ಕಣ್ಣುಗಳು!