Select Your Language

Notifications

webdunia
webdunia
webdunia
webdunia

2011 ರ ವಿಶ್ವಕಪ್ ಫಿಕ್ಸ್ ಆಗಿತ್ತು ಎಂದ ಶ್ರೀಲಂಕಾ ಸಚಿವ

2011 ರ ವಿಶ್ವಕಪ್ ಫಿಕ್ಸ್ ಆಗಿತ್ತು ಎಂದ ಶ್ರೀಲಂಕಾ ಸಚಿವ
ಮುಂಬೈ , ಶುಕ್ರವಾರ, 19 ಜೂನ್ 2020 (09:21 IST)
ಮುಂಬೈ: 2011 ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು ಎಂದು ಶ್ರೀಲಂಕಾದ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.


ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ-ಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ ಗೆದ್ದುಕೊಂಡು ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು.

‘2011 ರ ವಿಶ್ವಕಪ್ ವೇಳೆ ನಾನು ಕ್ರೀಡಾ ಸಚಿವನಾಗಿದ್ದೆ. ಆ ಪಂದ್ಯ ಫಿಕ್ಸ್ ಆಗಿತ್ತು. ಭಾರತ ಪಂದ್ಯ ಗೆದ್ದಿತ್ತು. ಕೆಲವು ಆಟಗಾರರು ಈ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರು. ಆದರೆ ದೇಶದ ಹಿತದೃಷ್ಟಿಯಿಂದ ನಾನು ಯಾವ ಆಟಗಾರರು ಭಾಗಿಯಾಗಿದ್ದರು ಎಂದು ಹೇಳಲ್ಲ. ಆದರೆ ನಾನು ಹೇಳುವ ಹೇಳಿಕೆಗೆ ಸದಾ ಬದ್ಧ’ ಎಂದು ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್ಗಮಗೆ ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಹಳ್ಳಿ ಜನರಿಗೆ ಮನೆ ಕಟ್ಟಲು ನೆರವಾದ ಕ್ರಿಕೆಟಿಗ ಪೃಥ್ವಿ ಶಾ