Publish Date: Mon, 22 Jun 2020 (10:34 IST)
Updated Date: Mon, 22 Jun 2020 (10:36 IST)
ಬಳ್ಳಾರಿ : ಬಳ್ಳಾರಿಯಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಇದೀಗ ಕೊರೊನಾಗೆ 62 ವರ್ಷದ ವೃದ್ಧರೊಬ್ಬರು ಸಾವನಪ್ಪಿದ್ದಾರೆ.
ಆಂಧ್ರ ಮೂಲದ 62 ವರ್ಷದ ವೃದ್ಧ ಸಾವನಪ್ಪಿದ್ದಾರೆ. ಇವರಿಗೆ ಕೊರೊನಾ ಸೋಂಕು ಇರುವ ಹಿನ್ನಲೆಯಲ್ಲಿ ಜೂ.17ರಂದು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಗದೆ ವೃದ್ಧ ಇಂದು ಸಾವನಪ್ಪಿದ್ದಾರೆ. ಆ ಮೂಲಕ ಬಳ್ಳಾರಿಯಲ್ಲಿ ಕೊರೊನಾಗೆ 3ನೇ ಬಲಿಯಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ಮಾಹಿತಿ ನೀಡಿದ್ದಾರೆ.