Select Your Language

Notifications

webdunia
webdunia
webdunia
webdunia

ಬಾಲಗೃಹದ ಯುವತಿಯರಲ್ಲಿ ಕೊರೊನಾ ವೈರಸ್ ಪತ್ತೆ, ಇಬ್ಬರು ಗರ್ಭಿಣಿ

ಬಾಲಗೃಹದ ಯುವತಿಯರಲ್ಲಿ ಕೊರೊನಾ ವೈರಸ್ ಪತ್ತೆ, ಇಬ್ಬರು ಗರ್ಭಿಣಿ
ಕಾನ್ಪುರ , ಭಾನುವಾರ, 21 ಜೂನ್ 2020 (21:05 IST)
ಟ್ರಾವೆಲ್ ಹಿಸ್ಟರಿ ಹೊಂದಿರದ 55 ಕ್ಕೂ ಹೆಚ್ಚು ಯುವತಿಯರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.

ಕಾನ್ಪುರ ಸ್ವರೂಪ ನಗರದಲ್ಲಿರುವ ಸರಕಾರಿ ಬಾಲಗೃಹದಲ್ಲಿದ್ದ ಯುವತಿಯರ ಪರೀಕ್ಷೆ ಮಾಡಲಾಗಿದ್ದು, 55 ಕ್ಕೂ ಹೆಚ್ಚು ಯುವತಿಯರಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ಇನ್ನು ಇವರಲ್ಲಿ ಇಬ್ಬರು ಅಪ್ರಾಪ್ತೆಯರು ಗರ್ಭಿಣಿಯರಾಗಿರುವ ವಿಷಯ ಬೆಳಕಿಗೆ ಬಂದರೆ, ಮತ್ತೊಬ್ಬಳಲ್ಲಿ ಹೆಚ್.ಐ.ವಿ ದೃಢಪಟ್ಟಿದ್ದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.

ಇಡೀ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದೆ. ಅಪ್ರಾಪ್ತೆಯರು ಗರ್ಭಿಣಿಯರಾಗಲು ಯಾರು ಕಾರಣ? ಹೆಚ್.ವಿ.ಐ ಸೋಂಕಿತೆಯ ಟ್ರಾವೆಲ್ ಹಿಸ್ಟರಿ ಏನು? ಕೊರೊನಾ ಮೊದಲು ಯಾರಿಂದ ಯಾರಿಗೆ ಹರಡಿತು? ಎಂಬುದರ ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚೀನಾಕ್ಕೆ ಸೆಡ್ಡು ಹೊಡೆಯಲು ಭಾರತೀಯ ಸೇನೆ ಸಿದ್ಧ