Select Your Language

Notifications

webdunia
webdunia
webdunia
webdunia

ಕೊರೊನಾ ಅಟ್ಟಹಾಸ ಹಿನ್ನೆಲೆ; ಕೆ.ಆರ್. ಮಾರ್ಕೆಟ್ ಶಿಫ್ಟ್ ಮಾಡುವ ಬಗ್ಗೆ ಇಂದು ನಿರ್ಧಾರ

ಕೊರೊನಾ ಅಟ್ಟಹಾಸ ಹಿನ್ನೆಲೆ;  ಕೆ.ಆರ್. ಮಾರ್ಕೆಟ್  ಶಿಫ್ಟ್ ಮಾಡುವ ಬಗ್ಗೆ ಇಂದು ನಿರ್ಧಾರ
ಬೆಂಗಳೂರು , ಸೋಮವಾರ, 22 ಜೂನ್ 2020 (10:10 IST)
ಬೆಂಗಳೂರು: ಕೊರೊನೊ ವೈರಸ್ ಹೆಚ್ಚಾದ ಹಿನ್ನಲೆ ಬಿಬಿಎಂಪಿ ಅಲರ್ಟ್ ಆಗಿದೆ. ಈಗ ಬೆಂಗಳೂರಿನಲ್ಲಿರೋ ಮಾರ್ಕೆಟ್ ಗಳನ್ನು ಶಿಫ್ಟ್ ಮಾಡಲು ಸಿದ್ಧತೆ ನಡೆಸಿದೆ. ಕೆ.ಆರ್. ಮಾರ್ಕೆಟ್ ಅನ್ನು ಶಿಫ್ಟ್ ಮಾಡುವ ಬಗ್ಗೆ ಇಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ದಿನೇ ದಿನೇ ಕೊರೊನಾ ಅಟ್ಟಹಾಸ ಹೆಚ್ಚಳವಾಗುತ್ತಿದೆ. ಜನ ಕೂಡ ಯಾವುದೇ ಅಂಜಿಕೆಯಿಲ್ಲದೇ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಜತೆಗೆ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಓಡಾಡುತ್ತಿದ್ದಾರೆ. ಸೋಂಕು ಹರಡುವುದನ್ನು ತಡೆಗಟ್ಟಲು ಮಾರ್ಕೆಟ್ ಗಳನ್ನು ಶಿಫ್ಟ್ ಮಾಡುವ ಸಾಧ್ಯತೆ ಇದೆ.ಈಗಾಗಲೇ ಬೇರೆ ಕಡೆ ಕಲಾಸಿಪಾಳ್ಯ ಮಾರುಕಟ್ಟೆ ಶಿಫ್ಟ್ ಆಗಿದೆ.ಇನ್ನು ಯಶವಂತ ಪುರ ಮಾರ್ಕೆಟ್ ಕೂಡ ಬಂದ್ ಮಾಡೋ ಸಾಧ್ಯತೆ ಇದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಔಷಧ ರೆಮ್ ಡಿಸಿವಿರ್ ಈಗ ಭಾರತದಲ್ಲಿಯೂ ಲಭ್ಯ