ಹೇರ್ ಕಟ್ ಮಾಡಲು ಮುಗಿಬಿದ್ದ ಜನ!

ಮಂಗಳವಾರ, 19 ಮೇ 2020 (09:27 IST)
ಬೆಂಗಳೂರು: ಹೆಚ್ಚು ಕಡಿಮೆ ಎರಡು ತಿಂಗಳಾಯಿತು ಹೇರ್ ಕಟ್ ಮಾಡಿಸಿಕೊಂಡು. ಕೊನೆಗೂ ಈಗ ಬೇಡದ ಕೂದಲಿಗೆ ಕತ್ತರಿ ಹಾಕುವ ಕಾಲ ಬಂದಿದೆ.


ರಾಜ್ಯ ಸರ್ಕಾರ ಲಾಕ್ ಡೌನ್ 4 ನಿಯಮಾವಳಿಯಲ್ಲಿ ಸಲೂನ್ ತೆರೆಯಲು ಅವಕಾಶ ಮಾಡಿಕೊಟ್ಟಿದ್ದೇ ತಡ. ಜನ ಹೇರ್ ಕಟ್ ಮಾಡಿಸಿಕೊಳ್ಳಲು ಸಲೂನ್ ಗಳ ಮುಂದೆ ಮುಗಿಬಿದ್ದಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಕೂದಲು ಕಟ್ ಮಾಡಿಸಿಕೊಳ್ಳಲೂ ಆಗದೇ ಕಿರಿ ಕಿರಿ ಅನುಭವಿಸುತ್ತಿದ್ದವರಿಗೆ ಈಗ ನೆಮ್ಮದಿ ಸಿಗಲಿದೆ. ಜತೆಗೆ ಸಲೂನ್  ನಡೆಸುವ ಕಾರ್ಮಿಕರಿಗೂ ಉದ್ಯೋಗ ಸಿಕ್ಕಂತಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಾಯಲ್ಲಿ ಹುಣ್ಣಾದಾಗ, ಒಸಡಿನಲ್ಲಿ ರಕ್ತ ಬರುತ್ತಿದ್ದರೆ ಈ ಮನೆಮದ್ದನ್ನು ಬಳಸಿ