Publish Date: Mon, 18 May 2020 (10:19 IST)
Updated Date: Mon, 18 May 2020 (10:23 IST)
ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಗೆ ಇಂದು ಜನ್ಮದಿನದ ಸಂಭ್ರಮವಾಗಿದ್ದು, ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.
88 ನೇ ವರ್ಷಕ್ಕೆ ಕಾಲಿಡುತ್ತಿರುವ ದೇವೇಗೌಡರಿಗೆ ಸಿಎಂ ಯಡಿಯೂರಪ್ಪ ಟ್ವಿಟರ್ ಮೂಲಕ ಶುಭ ಕೋರಿದ್ದು, ನಿಮಗೆ ಮತ್ತಷ್ಟು ಆಯುಷ್ಯ, ಆರೋಗ್ಯ ಕೊಟ್ಟು ದೇವರು ಕಾಪಾಡಲಿ ಎಂದು ಹಾರೈಸಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೂಡಾ ಟ್ವೀಟ್ ಮಾಡಿ ದೇವೇಗೌಡರಿಗೆ ಶುಭ ಕೋರಿದ್ದಾರೆ. ಹಲವಾರು ಮಂದಿ ಜೆಡಿಎಸ್ ಅಭಿಮಾನಿಗಳು, ರಾಜಕೀಯ ನಾಯಕರು, ಸೆಲೆಬ್ರಿಟಿಗಳು ದೇವೇಗೌಡರಿಗೆ ವಿಶ್ ಮಾಡುತ್ತಿದ್ದಾರೆ.