Select Your Language

Notifications

webdunia
webdunia
webdunia
webdunia

ಜನ್ಮದಿನ ಆಚರಣೆ ಮಾಡೋದಿಲ್ಲ ಎಂದ ಮಾಜಿ ಪ್ರಧಾನಿ

ಜನ್ಮದಿನ ಆಚರಣೆ ಮಾಡೋದಿಲ್ಲ ಎಂದ ಮಾಜಿ ಪ್ರಧಾನಿ
ಬೆಂಗಳೂರು , ಶನಿವಾರ, 16 ಮೇ 2020 (18:27 IST)
ಈ ಸಲದ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳದಿರುವ ನಿರ್ಧಾರಕ್ಕೆ ಮಾಜಿ ಪ್ರಧಾನಿ ಬಂದಿದ್ದಾರೆ.

ಮೇ 18 ರಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಜನ್ಮದಿನವಿದೆ. ಆದರೆ ಡೆಡ್ಲಿ ಕೊರೊನಾದಿಂದಾಗಿ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳದೇ ಇರಲು ಮಾಜಿ ಪ್ರಧಾನಿ ನಿರ್ಧರಿಸಿದ್ದಾರೆ.

ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಜಗತ್ತು ನಲಗುತ್ತಿದೆ. ಬಡವರಿಗೆ ಅನ್ನ ಸಿಗುತ್ತಿಲ್ಲ. ರೋಗಕ್ಕೆ ಈವರೆಗೂ ಔಷಧ ಕಂಡುಹಿಡಿಯಲಾಗುತ್ತಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜನ್ಮದಿನ ಆಚರಣೆ ಮಾಡಿಕೊಳ್ಳುವುದು ಸರಿಯಲ್ಲ.

ಅಭಿಮಾನಿಗಳು, ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಂಡು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಂತೆ ಅವರು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯಪಾನ ನಿಷೇಧ : ಹೊಸ ಬಾಂಬ್ ಸಿಡಿಸಿದ ಸಚಿವ