Publish Date: Wed, 24 Jun 2020 (09:42 IST)
Updated Date: Wed, 24 Jun 2020 (09:44 IST)
ಬೆಂಗಳೂರು: ಕೊರೋನಾ ಮಹಾಮಾರಿ ನಮ್ಮ ಅಕ್ಕಪಕ್ಕವೇ ಸದ್ದಿಲ್ಲದೇ ಸುಳಿಯುತ್ತಿದೆ. ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕುಟುಂಬದವರಿಗೇ ಕೊರೋನಾ ಕಂಟಕ ಶುರುವಾಗಿದೆ. ಇತ್ತ ಕಿಚ್ಚ ಸುದೀಪ್ ಪಕ್ಕದ ಮನೆಯವರಿಗೂ ಸೋಂಕು ತಗುಲಿರುವ ವಿಚಾರ ತಿಳಿದುಬಂದಿದೆ.
ಜೆಪಿ ನಗರದ ಕಿಚ್ಚ ಸುದೀಪ್ ಮನೆಯ ಪಕ್ಕದಲ್ಲೇ ಇರುವ ಇಬ್ಬರು ನಿವಾಸಿಗಳಿಗೆ ಕೊರೋನಾ ತಗುಲಿರುವ ಮಾಹಿತಿ ಬಂದಿದೆ. ಹೀಗಾಗಿ ಈ ಏರಿಯಾದಲ್ಲಿ ಸುಮಾರು 30 ಮಂದಿಯನ್ನು ಕ್ವಾರಂಟೈನ್ ಗೊಳಪಡಿಸಲಾಗಿದೆ. ಹೀಗಾಗಿ ಈ ಪ್ರದೇಶವನ್ನು ಕಂಟೈನ್ ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.