Select Your Language

Notifications

webdunia
webdunia
webdunia
Sunday, 13 April 2025
webdunia

ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಆಹ್ವಾನ
ಕಲಬುರಗಿ , ಮಂಗಳವಾರ, 23 ಜೂನ್ 2020 (20:10 IST)
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 6 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಇಚ್ಚೆಯುಳ್ಳ ಎಂ.ಬಿ.ಬಿ.ಎಸ್. ವೈದ್ಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರೋಸ್ಟರ್ ಕಮ್ ಮೇರಿಟ್ ಆಧಾರದ ಮೇಲೆ ಗರಿಷ್ಠ ಮಿತಿ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಥವಾ ನೇರ ನೇಮಕಾತಿ (ಕೆ.ಪಿ.ಎಸ್.ಸಿ ಯಿಂದ) ತುಂಬುವವರೆಗೆ ಅಥವಾ ವರ್ಗಾವಣೆಯಿಂದ ಖಾಯಂ ವೈದ್ಯರು ಹಾಜರಾಗುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ಖಾಲಿಯಿರುವ ಈ ಹುದ್ದೆಗಳನ್ನು ಭರ್ತಿಯಾಗುವವರೆಗೂ ಷರತ್ತಿಗೊಳಪಟ್ಟು ನೇರ ಸಂದರ್ಶನ (Walk-in-Interview) ಮೂಲಕ ಡಿಸೆಂಬರ್-2020ರ ಅಂತ್ಯದವರೆಗೆ ಮಾತ್ರ ನೇಮಕಾತಿ ಮಾಡಲಾಗುತ್ತದೆ.

ಮಾಹೆಯಾನ 45000 ರೂ. ಮತ್ತು 2000 ರೂ.ಗಳ ವಿಶೇಷ ಭತ್ಯೆ ನೀಡಲಾಗುತ್ತದೆ. ಇಚ್ಚೆಯುಳ್ಳ ಅರ್ಹ ಎಂ.ಬಿ.ಬಿ.ಎಸ್ ವೈದ್ಯ ಅಭ್ಯರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಕ್ಕೆ ಕಚೇರಿ ಸಮಯದಲ್ಲಿ ಪ್ರತಿ ಶುಕ್ರವಾರ ಅವಶ್ಯಕ ಮೂಲ ಹಾಗೂ ಜೇರಾಕ್ಸ್ ಪ್ರತಿಯ ಶೈಕ್ಷಣಿಕ ದಾಖಲಾತಿಗಳನ್ನು ಬಯೋಡಾಟಾದೊಂದಿಗೆ ಅರ್ಜಿ ಸಲ್ಲಿಸಬೇಕು.

ವಯೋಮಿತಿ, ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278618ಗೆ ಸಂಪರ್ಕಿಸಬಹುದು.



Share this Story:

Follow Webdunia kannada

ಮುಂದಿನ ಸುದ್ದಿ

ಕಾನ್ಸಟೇಬಲ್ ಗೆ ಹೂ ಮಳೆ ಸುರಿದ ಅಧಿಕಾರಿಗಳು