Publish Date: Tue, 23 Jun 2020 (19:38 IST)
Updated Date: Tue, 23 Jun 2020 (19:43 IST)
ಪೊಲೀಸ್ ಕಾನ್ಸಟೇಬಲ್ ವೊಬ್ಬರಿಗೆ ಅಧಿಕಾರಿಗಳು ಹೂ ಮಳೆ ಸುರಿದಿದ್ದಾರೆ.
ಕೋವಿಡ್‍ನಿಂದ ಗುಣಮುಖರಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಯಿಂದ ಹೊರಬಂದ ಬ್ಯಾಡಗಿ ಪೊಲೀಸ್ ಠಾಣೆ ಎಸ್.ಬಿ. ಕಾನ್‍ಸ್ಟೇಬಲ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಉನ್ನತ ಅಧಿಕಾರಿಗಳು ಹೂಗುಚ್ಛ ನೀಡಿ ಸಂಭ್ರಮದಿಂದ ಆಸ್ಪತ್ರೆಯಿಂದ ಮನೆಗೆ ಬೀಳ್ಕೊಟ್ಟರು.
ಕಳೆದ ಜೂನ್ 15 ರಂದು ಕದರಮಂಡಲಗಿಯ ನಿವಾಸಿಯಾದ 41 ವರ್ಷದ ಎಸ್.ಬಿ. ಕಾನ್‍ಸ್ಟೇಬಲ್‍ಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.