Publish Date: Sun, 10 May 2020 (09:05 IST)
Updated Date: Sun, 10 May 2020 (09:08 IST)
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಉತ್ತಮ ಅವಕಾಶ ಎದುರಾಗಿದೆ. ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ವಿವರಗಳಿಗಾಗಿ ಇಲ್ಲಿ ನೋಡಿ.
ಸಶಸ್ತ್ರ ಪೊಲೀಸ್ ಪಡೆ, ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 4012 ಹುದ್ದೆಗಳಿದ್ದು, ಈ ಪೈಕಿ 1002 ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿರುತ್ತವೆ. ಮೇ 20 ರಿಂದ ಜೂನ್ 22 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು
www.ksp.gov.in ಗೆ ಲಾಗಿನ್ ಆಗಿ.