Publish Date: Mon, 06 Jul 2020 (09:21 IST)
Updated Date: Mon, 06 Jul 2020 (09:23 IST)
ಮಂಗಳೂರು: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಗೆ ಕೊರೋನಾ ದೃಢಪಟ್ಟಿದೆ. ಸದ್ಯಕ್ಕೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರ ಹಿರಿಯ ಪುತ್ರ ಸಂತೋಷ್ ಮಾಧ‍್ಯಮಗಳಿಗೆ ತಿಳಿಸಿದ್ದಾರೆ. ಜುಲೈ 4 ರಂದು ಅವರ ಗಂಟಲು ದ್ರವ ಸ್ಯಾಂಪಲ್ ತೆಗೆದುಕೊಳ್ಳಲಾಗಿತ್ತು.