Publish Date: Sun, 05 Jul 2020 (09:18 IST)
Updated Date: Sun, 05 Jul 2020 (09:20 IST)
ಬೆಂಗಳೂರು: ರಾಜ್ಯ ರಾಜಧಾನಿ ಈಗ ಕೊರೋನಾ ರಾಜಧಾನಿಯಂತಾಗುತ್ತಿದೆ. ಪ್ರತಿನಿತ್ಯ ದಾಖಲೆಯ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ಕಂಡುಬರುತ್ತಿವೆ.
ಹಾಗಾಗಿ ಬೆಂಗಳೂರು ಈಗ ಸೇಫ್ ಅಲ್ಲ ಎಂದು ಎಲ್ಲರಿಗೂ ಭಯ ಶುರುವಾಗಿದೆ. ಹಾಗಿದ್ದರೂ ಬೆಂಗಳೂರಿನಲ್ಲಿ ಇರುವುದರಲ್ಲೇ ಕೊಂಚ ಸೇಫ್ ಪ್ರದೇಶವೆಂದರೆ ಬೆಂಗಳೂರು ಉತ್ತರ.
ಅತೀ ಹೆಚ್ಚು ಪ್ರಕರಣಗಳು ಬೆಂಗಳೂರು ಪೂರ್ವ, ಪಶ್ಚಿಮ ಭಾಗದಲ್ಲೇ ಕಂಡುಬರುತ್ತಿದೆ. ಹಾಗೆಂದು ಉಳಿದ ಭಾಗಗಳಲ್ಲಿ ಪ್ರಕರಣಗಳು ಕಂಡುಬಂದಿಲ್ಲ ಎಂದಲ್ಲ. ಆದರೆ ಈ ಭಾಗಗಳಿಗೆ ಹೋಲಿಸಿದರೆ ಬೆಂಗಳೂರು ಉತ್ತರವೇ ಕೊಂಚ ಸೇಫ್ ಎನ್ನಬಹುದು.