ಕೊರೋನಾ ರೋಗಿಗಳು ಹೆಚ್ಚಳ: ಆದರೆ ಬೆಡ್ ಗಳಿಲ್ಲದೇ ಬೆಂಗಳೂರಿಗರ ಪರದಾಟ

ಭಾನುವಾರ, 5 ಜುಲೈ 2020 (09:28 IST)
ಬೆಂಗಳೂರು: ಕೊರೋನಾ ಪ್ರಕರಣಗಳಲ್ಲಿ ಬೆಂಗಳೂರಿನದ್ದೇ ಮೇಲುಗೈ. ದಿನೇ ದಿನೇ ನೂರಾರು ಪ್ರಕರಣಗಳು ಕಂಡುಬರುತ್ತಲೇ ಇದೆ. ಆದರೆ ಇದಕ್ಕೆ ತಕ್ಕ ಹಾಗೆ ಚಿಕಿತ್ಸೆ ನೀಡಲು ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ.


ಬೆಡ್ ಗಳ ಕೊರತೆಯಿಂದಾಗಿ ಕಡಿಮೆ ಲಕ್ಷಣ ಇರುವವರಿಗೆ ಈಗಾಗಲೇ ಮನೆಯಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಆದರೂ ತೀರಾ ಅಗತ್ಯವಿರುವವರಿಗೂ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಬೆಡ್ ಗಳ ಕೊರತೆ ಕಾಣುತ್ತಿದೆ.

ದಿನೇ ದಿನೇ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬೆಂಗಳೂರಿನ ಪರಿಸ್ಥಿತಿ ಶೋಚನೀಯವಾಗಲಿದೆ. ಅದರ ಜತೆಗೆ ಗರ್ಭಿಣಿಯರು, ಇತರ ರೋಗಿಗಳ ಪರಿಸ್ಥಿತಿ ಹೇಳುವಂತೆಯೇ ಇಲ್ಲ. ಎಲ್ಲೂ ಆಸ್ಪತ್ರೆ ಸಿಗದೇ ಅಲೆದಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೋನಾಕ್ಕೆ ಧೈರ್ಯವೇ ಮದ್ದು! ಆತಂಕ್ಕೊಳಗಾದರೆ ಅಪಾಯ ಖಂಡಿತಾ