ಕೊರೋನಾಕ್ಕೆ ಧೈರ್ಯವೇ ಮದ್ದು! ಆತಂಕ್ಕೊಳಗಾದರೆ ಅಪಾಯ ಖಂಡಿತಾ

ಭಾನುವಾರ, 5 ಜುಲೈ 2020 (09:25 IST)
ಬೆಂಗಳೂರು: ಎಲ್ಲಿ ನೋಡಿದರೂ ಕೊರೋನಾದ್ದೇ ಸುದ್ದಿ. ಕೊರೋನಾ ಬಂದರೆ ನನ್ನ ಗತಿ ಏನು ಎಂದು ಎಲ್ಲರೂ ಆತಂಕಪಡುವಂತಾಗಿರುವುದು ಸಹಜ. ಹಾಗಂತ ಕೊರೋನಾ ಬಂದ ತಕ್ಷಣ ಸಾವೇ ಗತಿ ಎಂದಲ್ಲ.


ಕೊರೋನಾ ಕೂಡಾ ಇತರ ವೈರಾಣುಗಳಂತೇ ಒಂದು ವೈರಾಣು ಎಂದುಕೊಂಡು ಧೈರ್ಯದಿಂದ ಎದುರಿಸಿದರೆ ನಾವು ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.

ಆದಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಕೊರೋನಾ ಬಗೆಗಿನ ಭಯ ದೂರ ಮಾಡುವುದೂ ಅಗತ್ಯ. ಕೊರೋನಾ ಬಂದ ತಕ್ಷಣವೇ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಳ್ಳಬೇಕು. ಹೆಚ್ಚಿನ ಪ್ರಕರಣಗಳಲ್ಲಿ ಧೈರ್ಯಗೆಡುವುದರಿಂದಲೇ ಈ ರೋಗ ನಮ್ಮನ್ನು ನುಂಗಿ ಹಾಕುವ ಹಂತಕ್ಕೆ ಬರುತ್ತಿದೆ. ಹಾಗಾಗಿ ಆದಷ್ಟು ಪೋಷಕಾಂಶಯುಕ್ತ ಆಹಾರ ಸೇವನೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುವುದರ ಜತೆಗೆ ಧೈರ್ಯವಾಗಿ ಕೊರೋನಾ ವಿರುದ್ಧ ಹೋರಾಡುವ ಮನೋಬಲವನ್ನೂ ನಾವು ಬೆಳೆಸಿಕೊಳ್ಳಬೇಕಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸದ್ಯಕ್ಕೆ ಬೆಂಗಳೂರಿನ ಈ ಭಾಗವೇ ಸೇಫ್!