Publish Date: Wed, 13 Feb 2019 (13:38 IST)
Updated Date: Wed, 13 Feb 2019 (13:40 IST)
ಸಾರಾ ಅಲಿ ಖಾನ್ ಕರಣ್ ಜೋಹರ್ ಅವರ ಕಾಫೀ ಶೋನಲ್ಲಿ ತಾವು ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದಾಗಿನಿಂದ ಬಹುತೇಕ ಪ್ರತಿದಿನ ಇವರಿಬ್ಬರೂ ಸುದ್ದಿಯಲ್ಲಿದ್ದಾರೆ.
ಸೋನು ಕಿ ಟಿಟು ಕಿ ಸ್ವೀಟಿ ಚಿತ್ರದ ನಟ ಕಾರ್ತಿಕ್ ಮೇಲೆ ತಮಗಿರುವ ಕ್ರಷ್ ಅನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಕಾರ್ತಿಕ್ ಆರ್ಯನ್ ಸಹ ಕಾಫೀ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಮ್ಮ ಲುಕಾ ಚುಪ್ಪಿ ಸಹ ನಟಿ ಕೃತಿ ಸನನ್ ಜೊತೆ ಕಾಣಿಸಿಕೊಂಡಿದ್ದು ಅಂತಿಮವಾಗಿ ಸಾರಾಗೆ ಕರೆ ಮಾಡಿದ್ದಾರೆ, ಆದರೆ ಡೇಟ್‌ಗಾಗಿ ಅಲ್ಲ.
ಕರಣ್ ಅವರ ಈ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಈ ಸ್ಟಾರ್‌ಗಳು ಚಲನಚಿತ್ರೋದ್ಯಮದ ಜನರಿಗೆ ಕರೆ ಮಾಡಬೇಕು ಮತ್ತು ಅವರಿಂದ 'ಹೇ ಕರಣ್ ಇಟ್ಸ್ ಮಿ' ಎಂದು ಹೇಳಿಸಬೇಕು. ಈ ಸ್ಪರ್ಧೆಯಲ್ಲಿ ಕಾರ್ತಿಕ್ ಮೊದಲು ಸೋನಾಕ್ಷಿ ಸಿನ್ಹಾಗೆ ಮತ್ತು ನಂತರ 'ಸ್ಟುಡೆಂಟ್ ಆಫ್ ದಿ ಇಯರ್ 2' ನ ನಟಿ ಅನನ್ಯಾ ಪಾಂಡೆಗೆ ಕರೆಮಾಡಿದ್ದಾರೆ. ಮೂರನೆಯದಾಗಿ ಸಾರಾ ಅಲಿ ಖಾನ್‌ಗೆ ಕರೆ ಮಾಡಿದ್ದಾರೆ. ಕಾರ್ತಿಕ್ ಸಾರಾಗೆ ಡೇಟ್‌ಗೆ ಕರೆಯದಿದ್ದರೂ ಅವರ ಬಳಿ ಸಾರಾ ಮೊಬೈಲ್ ಸಂಖ್ಯೆ ಇರುವುದು ಖಚಿತವಾಗಿದೆ.
ಈಮಧ್ಯೆ, ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ ಇಮ್ತಿಯಾಜ್ ಅಲಿ ಅವರ 'ಲವ್ ಆಜ್ ಕಲ್ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವದಂತಿಯಿದೆ.