ಜಾನ್ ಅಬ್ರಾಹಂರವರು ಪ್ರೇರಣಾ ಅರೋರಾ ವಿರುದ್ಧ ದೂರು ದಾಖಲಿಸಲು ಕಾರಣವೇನು..?

Webdunia
ಸೋಮವಾರ, 9 ಏಪ್ರಿಲ್ 2018 (06:51 IST)
ಮುಂಬೈ : ಬಾಲಿವುಡ್ ನಟ, ನಿರ್ಮಾಪಕರಾದ ಜಾನ್ ಅಬ್ರಾಹಂ ಅವರು ಪ್ರೇರಣಾ ಅರೋರಾ ಹಾಗೂ ಅವರ  ಎಂಟರ್ ಟೈನ್ ಮೆಂಟ್ ಸಂಸ್ಥೆಯ ಮೇಲೆ ವಂಚನೆ ಹಾಗೂ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.


ಒಪ್ಪಂದ ಒಂದರ  ಮೇರೆಗೆ ಜಾನ್ ಅಬ್ರಾಹಂ ಅವರ 'ಜೆಎ ಎಂಟರ್‌ಟ್ರೈನ್‌ಮೆಂಟ್' ಹಾಗೂ  ಪ್ರೇರಣಾ ಅವರ 'ಕ್ರಿರಿಜ್ ಎಂಟರ್‌ಟ್ರೈನ್‌ಮೆಂಟ್' ಸಂಸ್ಥೆ ಎರಡು ಜೊತೆ   ಸೇರಿ ‘ಪರಮಾಣು’ ಚಿತ್ರವನ್ನು ಪ್ರೊಡ್ಯೂಸ್‌ ಮಾಡಲು ಒಪ್ಪಿಕೊಂಡಿದ್ದು, ಒಪ್ಪಂದದ ಪ್ರಕಾರ ನಟರ ಸಂಭಾವನೆ, ಜಾಹೀರಾತು ಖರ್ಚು ಸೇರಿದಂತೆ 35 ಕೋಟಿ ರೂ, ಕಿರಿಜ್‌ ಸಂಸ್ಥೆಯು ಜೆಎ ಸಂಸ್ಥೆಗೆ ನೀಡಬೇಕಿತ್ತು. ಆದರೆ ಪ್ರೇರಣಾ ಅವರು ತಪ್ಪು ಬ್ಯಾಂಕ್ ದಾಖಲೆಗಳನ್ನು ನೀಡಿದಲ್ಲದೇ ಕೊನೆಯ ಹಂತದ ಸಂಭಾವನೆ ನೀಡಲು ಕೂಡ ನಿರಾಕರಿಸಿದ್ದಾರೆ.ಆದಕಾರಣ ಜಾನ್ ಅಬ್ರಾಹಂ ಅವರು ಪ್ರೇರಣಾ ವಿರುದ್ಧ ಕಾನೂನು ಮೂಲಕ ನೋಟಿಸ್‌ ನೀಡಿ ಈ ಒಪ್ಪಂದದಿಂದ ಹೊರ ಬಂದಿದ್ದರು.


ಇದಾದ ನಂತರ ಪ್ರೇರಣಾ ಅವರು ಜಾನ್ ಅವರ  ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಿಸಿ ಮಾಧ್ಯಮಗಳಲ್ಲಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಾಗೇ ಚಿತ್ರದ ಪ್ರಚಾರಕ್ಕೂ ಕೂಡ ತೊಡಕನ್ನುಂಟುಮಾಡಿದ್ದರು. ಆದಕಾರಣ  ಇದೀಗ ಜಾನ್ ಅಬ್ರಾಹಂ ಅವರು ಮುಂಬೈನ ಖೇರ್‌ ಪೊಲೀಸ್ ಠಾಣೆಯಲ್ಲಿ ಪ್ರೇರಣಾ ವಿರುದ್ಧ ದೂರು ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮುಂದಿನ ಸುದ್ದಿ
Show comments