Select Your Language

Notifications

webdunia
webdunia
webdunia
webdunia

ಶೂಟಿಂಗ್ ಬಿಟ್ಟು ತರಾತುರಿಯಲ್ಲಿ ಅಮಿತಾಭ್ ಬಚ್ಚನ್ ಭಾರತಕ್ಕೆ ಬಂದಿದ್ಯಾಕೆ….?

ಶೂಟಿಂಗ್ ಬಿಟ್ಟು ತರಾತುರಿಯಲ್ಲಿ ಅಮಿತಾಭ್ ಬಚ್ಚನ್ ಭಾರತಕ್ಕೆ ಬಂದಿದ್ಯಾಕೆ….?
ಮುಂಬೈ , ಮಂಗಳವಾರ, 7 ಆಗಸ್ಟ್ 2018 (08:17 IST)
ಮುಂಬೈ: ಬಲ್ಗೇರಿಯಾದಲ್ಲಿ  ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಅಭಿನಯಿಸುತ್ತಿರುವ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅವಿರತವಾಗಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಅಮಿತಾಬ್ ಬಚ್ಚನ್  ಇದ್ದಕ್ಕಿದ್ದಂತೆ ಶೂಟಿಂಗ್ ಬಿಟ್ಟು ಭಾರತಕ್ಕೆ ಮರಳಿದ್ದಾರೆ.


ಇದಕ್ಕೆ ಕಾರಣ ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಅವರ ಮಾವ ರಾಜನ್ ನಂದಾ ಇಹಲೋಕ ತ್ಯಜಿಸಿದ್ದು. ಗುರ್ಗಾಂವ್ ಆಸ್ಪತ್ರೆಯಲ್ಲಿ ರಾಜನ್ ನಂದಾ ಕೊನೆಯುಸಿರೆಳೆದಿದ್ದಾರೆ. ರಾಜನ್ ನಂದಾ ಅವರ ಅಂತಿಮ ದರ್ಶನ ಪಡೆಯಲು ಅಮಿತಾಬ್ ಬಚ್ಚನ್ ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ವಿಚಾರವನ್ನು ಅಮಿತಾಬ್ ಬಚ್ಚನ್ ಟ್ವೀಟರ್ ನಲ್ಲಿ ಹೇಳಿದ್ದಾರೆ.


ರಿಷಿಕಪೂರ್ ಮಗಳು ರಿದ್ದಿಮಾ ಕಪೂರ್ ಕೂಡ ಇನ್ಸ್ಟ್ರಾಗ್ರಾಮ್ ನಲ್ಲಿ ರಾಜನ್ ನಂದಾ ಫೋಟೋ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ರಾಜನ್ ನಂದಾ ಎಸ್ಕಾರ್ಟ್ಸ್ ಗ್ರೂಪ್ ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಲಿಯೋನ್ ಈ ನಿರ್ಧಾರದಿಂದ ಅಭಿಮಾನಿಗಳು ಫುಲ್ ಖುಷ್ ಅಂತೆ!