Publish Date: Fri, 09 Feb 2018 (07:09 IST)
Updated Date: Fri, 09 Feb 2018 (07:15 IST)
ಮುಂಬೈ : ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಟ್ರೋಲ್ ಗೆ ಗುರಿಯಾಗುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಾರಿ ಬಾಲಿವುಡ್ ನಟ ಅಮೀರ್ ಖಾನ್ ಅವರು ಟ್ರೋಲ್ ಗೆ ತುತ್ತಾಗಿದ್ದಾರೆ.
ನಟಿ ಕತ್ರೀನಾ ಕೈಫ್ ಅವರು ಅಮೀರ್ ಖಾನ್ ಹಾಗೂ ಫಾತಿಮಾ ಸನಾ ಶೇಖ್ ಅವರ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ಇನ್ ಸ್ಟಾಗ್ರಾಮ್ನಲ್ಲಿ ಹಾಕಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು, ಕತ್ರೀನಾ ಕೈಫ್ 5 ಅಡಿ 9 ಇಂಚು ಎತ್ತರವಿದ್ದಾಳೆ. ಅಮೀರ್ ಖಾನ್ ಎತ್ತರ ಕೇವಲ 5 ಅಡಿ 4 ಇಂಚು. ಆದ್ರೆ ಈ ಫೋಟೋದಲ್ಲಿ ಮಾತ್ರ ಕತ್ರೀನಾಗಿಂತ್ಲೂ ಅಮೀರ್ ಖಾನ್ 5 ಇಂಚು ಎತ್ತರ ಕಾಣ್ತಿದ್ದಾರೆ. ಹಾಗಾಗಿ ಅಮೀರ್ ಹೈ ಹೀಲ್ಸ್ ಹಾಕಿದ್ದಾರಾ ಅಂತಾ ಕೆಲವರು ಪ್ರಶ್ನಿಸಿದ್ದರೆ, ಇನ್ನೂ ಕೆಲವರು ಅಮೀರ್ ಕಾಂಪ್ಲಾನ್ ಕುಡಿಯುತ್ತಿದ್ದಾರೆ, ಹಾಗಾಗಿ ಕತ್ರೀನಾಗಿಂತ ಹೆಚ್ಚು ಎತ್ತರವಾಗಿದ್ದಾರೆ ಎಂದು ಅಮೀರ್ ಖಾನ್ ಅವರ ಕುರಿತು ತಮಾಷೆ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ