Select Your Language

Notifications

webdunia
webdunia
webdunia
webdunia

ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಅವರು ತನ್ನೆದುರೇ ನಟಿಯನ್ನು ತಬ್ಬಿಕೊಂಡ ಪತಿಗೆ ನೀಡಿದ ಚಮಕ್ಕೇನು ಗೊತ್ತಾ?

ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಅವರು ತನ್ನೆದುರೇ ನಟಿಯನ್ನು ತಬ್ಬಿಕೊಂಡ ಪತಿಗೆ ನೀಡಿದ ಚಮಕ್ಕೇನು ಗೊತ್ತಾ?
ಮುಂಬೈ , ಮಂಗಳವಾರ, 6 ಫೆಬ್ರವರಿ 2018 (05:58 IST)
ಮುಂಬೈ: ಬಾಲಿವುಡ್‍ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಅವರು ತನ್ನೆದುರೇ ನಟಿಯನ್ನು ತಬ್ಬಿಕೊಂಡ ತಮ್ಮ ಪತಿ ಶಾಹಿದ್‍ಗೆ ಕ್ಷಣಾರ್ಧದಲ್ಲಿ ಚಮಕ್ ವೊಂದನ್ನು ನೀಡಿದ್ದಾರೆ.


ಫೆಬ್ರವರಿ 1ರಂದು ನಗರದಲ್ಲಿ ಖಾಸಗಿ ಮಾಧ್ಯಮವೊಂದು ಮೋಸ್ಟ್ ಸ್ಟೈಲಿಶ್ ಅವಾರ್ಡ್-2018 ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಪ್ರಶಸ್ತಿ ಸಮಾರಂಭಕ್ಕೆ ಬಾಲಿವುಡ್‍ನ ಎಲ್ಲ ತಾರೆಯರು ಆಗಮಿಸಿದ್ದು, ಈ ಕಾರ್ಯಕ್ರಮಕ್ಕೆ ಬಾಲಿವುಡ್ ಕ್ಯೂಟ್ ಕಪಲ್ ಶಾಹಿದ್ ಕಪೂರ್ ಹಾಗೂ ಅವರ ಪತ್ನಿ ಮೀರಾ ರಜಪೂತ್ ಅವರು ಕೂಡ ಆಗಮಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶಾಹಿದ್ ಕಪೂರ್ ಮತ್ತು ಮೀರಾ ಮಾಧ್ಯಮಗಳೊಂದಿಗೆ ‘ಪದ್ಮಾವತ್’ ಸಿನಿಮಾದ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಪಕ್ಕದಲ್ಲಿ ನಟಿ ವಾಣಿ ಕಪೂರ್ ಆಗಮಿಸುತ್ತಿದ್ದಂತೆ ಶಾಹಿದ್ ಮಾಧ್ಯಮಗೋಷ್ಠಿಯನ್ನು ಅರ್ಧಕ್ಕೆ ಬಿಟ್ಟು ಹೋಗಿ ತಬ್ಬಿಕೊಂಡು ಸ್ವಾಗತಿಸಿದರು. ಇದನ್ನು ನೋಡಿ ಪತ್ನಿ ಮೀರಾ ಮುಗುಳು ನಗೆ ಬೀರಿದರೂ ಕೂಡ ಅವರಲ್ಲಿ ಬೇಸರದ ಭಾವನೆ ತೋರುತ್ತಿತ್ತು.


ನಂತರ ವಾಣಿ ಕಪೂರ್ ಹಿಂದೆಯೇ ‘ಐಸ್’ ಚಿತ್ರದ ನಿರ್ದೇಶಕ ಇಮ್ತಿಯಾಜ್ ಅಲಿ ಬಂದರು. ಕೂಡಲೇ ಪತಿ ಪಕ್ಕದಲ್ಲಿ ನಿಂತಿದ್ದ ಮೀರಾ ಮುಂದೆ ಹೋಗಿ ಇಮ್ತಿಯಾಜ್ ಅಲಿಯನ್ನು ಹಗ್ ಮಾಡಿಕೊಂಡು ಸ್ವಾಗತ ಮಾಡಿ ಪತಿ ಶಾಹಿದ್‍ಗೆ ಚಮಕ್ ನೀಡಿದ್ದಾರೆ. ಇದನ್ನು ನೋಡಿ ಶಾಹಿದ್ ಸ್ವಲ್ಪ ಕಸಿವಿಸಿಗೊಂಡರು. ಈ ಎಲ್ಲ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾವನಾ ಹಾಗೂ ನವೀನ್ ಆರತಕ್ಷತೆಯಲ್ಲಿ ಶುಭ ಹಾರೈಸಿದ ಸ್ಯಾಂಡಲ್ ವುಡ್ ತಾರೆಯರು