Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಅವರಿಗೆ ಒಲಿದು ಬಂದ ಪ್ರಶಸ್ತಿ ಯಾವುದು ಗೊತ್ತಾ...?

ಶಾರುಖ್  ಖಾನ್ ಅವರಿಗೆ ಒಲಿದು ಬಂದ ಪ್ರಶಸ್ತಿ ಯಾವುದು ಗೊತ್ತಾ...?
ಮುಂಬೈ , ಮಂಗಳವಾರ, 16 ಜನವರಿ 2018 (07:01 IST)
ಮುಂಬೈ : ಬಾಲಿವುಡ್ ನ ಬಾದ್ ಶಾ ಶಾರುಖ್  ಖಾನ್ ಅವರು ಪ್ರತಿಷ್ಠಿತ ವರ್ಲ್ಡ್ ಎಕಾನಮಿಕ್ ಫೋರಂನ ಕ್ರಿಸ್ಟಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

 
ಭಾರತದಲ್ಲಿ  ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಕುರಿತಾಗಿ ಜಾಗೃತಿ ಕಾರ್ಯಗಳನ್ನು ಮಾಡಿದ್ದನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಮುಂದಿನ ತಿಂಗಳು ಡಾವೊಸ್ ನಲ್ಲಿ ನಡೆಯಲಿರುವ ಸಮಾರಂಭವೊಂದರಲ್ಲಿ ಅವರು ಈ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಅವರ ಜೊತೆಗೆ ಹಾಲಿವುಡ್ ನ ಸ್ಟಾರ್ ಕೇಟ್ ಬ್ಲಾಂಕೆಟ್ ಹಾಗು ಖ್ಯಾತ ಸಂಗೀತಗಾರ ಎಲ್ಟನ್ ಜಾನ್ ಅವರೂ ಕೂಡ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 
ಮೊದಲು ಈ ಪ್ರಶಸ್ತಿಯನ್ನು ಪಡೆದ ಭಾರತೀಯರೆಂದರೆ ಅಮಿತಾಭ್ ಬಚ್ಚನ್, ಮಲ್ಲಿಕಾ ಸಾರಾಭಾಯಿ, ಎ.ಆರ್.ರೆಹಮಾನ್, ಶಬಾನ ಆಜ್ಮಿ, ರವಿಶಂಕರ್ ಹಾಗು ಅಮ್ಜದ್ ಆಲಿ ಖಾನ್.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಯು.ಟಿ.ಖಾದರ್ ಅವರಿಗೆ ಟಾಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್