Publish Date: Tue, 16 Jan 2018 (06:49 IST)
Updated Date: Tue, 16 Jan 2018 (06:57 IST)
ಮಂಗಳೂರು : ಸಚಿವ ಯು.ಟಿ.ಖಾದರ್ ಅವರು ತಾನು ಮುಸ್ಲಿಂ ಎನ್ನುವ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ತನ್ನನ್ನು ಅನುಮಾನದಿಂದ ನೋಡಲಾಗುತ್ತಿದೆ ಎಂದು ಹೇಳಿದಕ್ಕೆ ಒಳ್ಳೆ ಹುಡುಗ ಪ್ರಥಮ್ ಅವರು ಫೇಸ್ ಬುಕ್ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಪ್ರಥಮ್ ಅವರು, ‘ನಿಮಗೆ ಅಷ್ಟೊಂದು ಅವಮಾನ, ಅನುಮಾನ ಆಗುತ್ತಿದ್ದರೆ ಬೇರೆ ಧರ್ಮಕ್ಕೆ ಮತಾಂತರವಾಗಿಬಿಡಿ , ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಿಬಿಡಿ. ಯಾಕೆ ಕಷ್ಟ ಪಟ್ಟು ಮುಸ್ಲಿಂ ಆಗಿರುತ್ತೀರಾ. ಭಾರತದಲ್ಲಿ ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಬಹುದು. ನನ್ನ ಪ್ರೀತಿಯ ದಲಿತರಾಗಿ, ನಾಯಕ, ಕುರುಬರಾದರೂ ಆಗಿ ಫುಲ್ ಫ್ರೀಡಂ ಇದೆ. ನಾನು ಗ್ಯಾರಂಟಿ ಕೊಡುತ್ತೇನೆ. ಹಿಂದೂ ಧರ್ಮದಲ್ಲಿ ನಿಮ್ಮನ್ನು ಅನುಮಾನದಿಂದ ನೋಡಲ್ಲ. ಆರಾಮವಾಗಿ ಬನ್ನಿ ಖಾದರ್’ ಎಂದು ಫೇಸ್ ಬುಕ್ ಫೇಜ್ ನಲ್ಲಿ ಬರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ