Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯ ಈ ನಡೆ ದ.ಆಫ್ರಿಕನ್ನರ ಮೆಚ್ಚುಗೆಗೆ ಕಾರಣವಾಯ್ತು!

ವಿರಾಟ್ ಕೊಹ್ಲಿ
ಸೆಂಚೂರಿಯನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರಾಳಿಗಳ ಪಾಲಿಗೆ ಮೈದಾನದಲ್ಲಿ ಫ್ರೆಂಡ್ಲೀ ಅಲ್ಲ ಎನ್ನುವುದೇ ಎಲ್ಲರ ನಂಬಿಕೆ. ಆದರೆ ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ನಾಯಕನ ಈ ವರ್ತನೆ ಮೆಚ್ಚುಗೆಗೆ ಪಾತ್ರವಾಗಿದೆ.
 

ಅಷ್ಟಕ್ಕೂ ಕೊಹ್ಲಿ ಎದುರಾಳಿಗಳು ಮೆಚ್ಚುವಂತಹ ಯಾವ ಕೆಲಸ ಮಾಡಿದ್ದಾರೆ ಗೊತ್ತಾ? ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಆಫ್ರಿಕಾದ ಆರಂಭಿಕ ಮಾರ್ಕರಾಮ್ 94 ರನ್ ಗಳಿಗೆ ಔಟಾಗಿ ಶತಕ ವಂಚಿತರಾಗಿದ್ದರು.

ಆದರೆ ನಿರಾಸೆಯಲ್ಲಿ ಮರಳುತ್ತಿರುವಾಗ ಮಾರ್ಕರಾಮ್ ಬಳಿ ಬಂದ ಕೊಹ್ಲಿ ‘ಚೆನ್ನಾಗಿ ಆಡಿದ್ದೀರಾ. ನೀವು ಸ್ವಲ್ಪದರಲ್ಲೇ ಶತಕ ಅವಕಾಶ ಕಳೆದುಕೊಂಡಿದ್ದು ದುರದೃಷ್ಟ’ ಎಂದು ಬೆನ್ನುತಟ್ಟಿದರಂತೆ. ಇದನ್ನು ಸ್ವತಃ ಮಾರ್ಕರಾಮ್ ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಎದುರಾಳಿ ಔಟಾಗಿ ನಿರ್ಗಮಿಸುವಾಗ ಕಿರುಚಾಡಿ ವಿಚಿತ್ರವಾಗಿ ಬೀಳ್ಕೊಡುವ ಕೊಹ್ಲಿಯ ಈ ನಡೆಯಿಂದ ಮಾರ್ಕರಾಮ್ ಖುಷಿಯಾಗಿದ್ದಾರೆ.  ಕೊಹ್ಲಿಯ ಈ ನಡೆ ಬಗ್ಗೆ ಅವರು ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಹುಡುಗರ ನೋಡಿ ಕೊಹ್ಲಿಗೆ ಗಂಗೂಲಿ ಹೇಳಿದ್ದೇನು ಗೊತ್ತಾ?!