Publish Date: Sun, 14 Jan 2018 (17:13 IST)
Updated Date: Sun, 14 Jan 2018 (17:15 IST)
ಸೆಂಚೂರಿಯನ್: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ದ. ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಬೇಕೆಂದು ಸಾಕಷ್ಟು ಒತ್ತಾಯಗಳು ಬಂದ ಮೇಲೆ ತಂಡಕ್ಕೆ ಬಂದಿದ್ದರು. ಆದರೆ ನಿರೀಕ್ಷೆಗಳನ್ನು ರಾಹುಲ್ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ಭಾರತ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿ ಸಂಕಷ್ಟದಲ್ಲಿದೆ. ಮುರಳಿ ವಿಜಯ್ ಜತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಕೇವಲ 10 ರನ್ ಗಳಿಗೆ ಮೊದಲನೆಯವರಾಗಿ ವಿಕೆಟ್ ಒಪ್ಪಿಸಿದ್ದಾರೆ. ಇದರಲ್ಲಿ ಎರಡು ಬೌಂಡರಿಯೂ ಸೇರಿತ್ತು. ಮೋರ್ನೆ ಮಾರ್ಕೆಲ್ ಈ ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ರಾಹುಲ್ ಬೆನ್ನಲ್ಲೇ ನಂಬಿಕಸ್ಥ ಬ್ಯಾಟ್ಸ್ ಮನ್ ಎಂದೇ ಖ್ಯಾತಿ ಪಡೆದಿರುವ ಚೇತೇಶ್ವರ ಪೂಜಾರ ಕೂಡಾ ಶೂನ್ಯಕ್ಕೆ ರನೌಟ್ ಆಗಿ ನಿರ್ಗಮಿಸಿದ್ದು ಭಾರತಕ್ಕೆ ದೊಡ್ಡ ಹೊಡೆತ ನೀಡಿದೆ. ಇದೀಗ ಮುರಳಿ ವಿಜಯ್ ಹಾಗೂ (18) ಮತ್ತು ನಾಯಕ ಕೊಹ್ಲಿ (17) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇವರಿಬ್ಬರು ನೆಲಕಚ್ಚಿ ಆಡದಿದ್ದರೆ ಮೊದಲ ಟೆಸ್ಟ್ ನ ಸ್ಥಿತಿ ಪುನರಾವರ್ತನೆ ಆಗುವುದರಲ್ಲಿ ಸಂಶಯವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ