Select Your Language

Notifications

webdunia
webdunia
webdunia
webdunia

ಗಂಡಸ್ತನ ಕೆಣಕಿದ ನೆಟ್ಟಿಗನಿಗೆ ತಕ್ಕ ಉತ್ತರ ನೀಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ಗಂಡಸ್ತನ ಕೆಣಕಿದ ನೆಟ್ಟಿಗನಿಗೆ ತಕ್ಕ ಉತ್ತರ ನೀಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ಮುಂಬೈ , ಭಾನುವಾರ, 23 ಜುಲೈ 2023 (17:28 IST)
Photo Courtesy: Twitter
ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ಗಂಡಸ್ತನ ಇದ್ದರೆ ಮಣಿಪುರಿ ಫೈಲ್ಸ್ ಸಿನಿಮಾ ಮಾಡಿ ಎಂದು ಕೆಣಕಿದ ನೆಟ್ಟಿಗನಿಗೆ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಕ್ಕ ತಿರುಗೇಟು ನೀಡಿದ್ದಾರೆ.

ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಿದ ಬಳಿಕ ವಿವೇಕ್ ಅಗ್ನಿಹೋತ್ರಿ ಮತ್ತೆ ಅಂತಹದ್ದೇ ನೈಜ ಘಟನೆಯಾಧಾರಿತ ವ್ಯಾಕ್ಸಿನ್ ವಾರ್ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಇದಲ್ಲದೆ, ಮತ್ತೊಮ್ಮೆ ಕಾಶ್ಮೀರ ಬಗ್ಗೆ ಸಿನಿಮಾ ಮಾಡಲು ಹೊರಟಿದ್ದಾರೆ.

ಈ ನಡುವೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಉಲ್ಲೇಖಿಸಿ ನೆಟ್ಟಿಗನೊಬ್ಬ ಟ್ವಿಟರ್ ನಲ್ಲಿ ವಿವೇಕ್ ಅಗ್ನಿಹೋತ್ರಿಗೆ ಟಾಂಗ್ ಕೊಟ್ಟಿದ್ದಾರೆ. ನಿಮಗೆ ಗಂಡಸ್ತನ ಎನ್ನುವುದು ಇದ್ದರೆ ಮಣಿಪುರ ಫೈಲ್ಸ್ ಎನ್ನುವ ಸಿನಿಮಾ ಮಾಡಿ ಎಂದಿದ್ದರು. ಆತನಿಗೆ ತಕ್ಕ ತಿರುಗೇಟು ನೀಡಿರುವ ವಿವೇಕ್ ಅಗ್ನಿಹೋತ್ರಿ, ‘ನನ್ನ ಮೇಲೆ ಇಷ್ಟೊಂದು ನಂಬಿಕೆಯಿಟ್ಟಿರುವುದಕ್ಕೆ ಧನ್ಯವಾದಗಳು. ಆದರೆ ಎಲ್ಲಾ ಸಿನಿಮಾಗಳನ್ನೂ ನಾನೇ ಮಾಡಬೇಕಾ? ನಿಮ್ಮ ‘ಟೀಂ ಇಂಡಿಯಾ’ದಲ್ಲಿ ಗಂಡಸ್ತನ ಇರುವ ಸಿನಿಮಾ ನಿರ್ಮಾಪಕರು ಇಲ್ವಾ?’ ಎಂದು ತಿರುಗೇಟು ನೀಡಿದ್ದಾರೆ.  ಈ ಟ್ವೀಟ್ ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆದ್ದ ಹಾಸ್ಟೆಲ್ ಹುಡುಗರು: ಹೇಗಿದೆ ಕಲೆಕ್ಷನ್?