ಮುಂಬೈ: ಡ್ರಗ್ ಕೇಸ್ ನಲ್ಲಿ ಪುತ್ರ ಆರ್ಯನ್ ಖಾನ್ ಗೆ ಬೇಲ್ ಸಿಕ್ಕಿದ ಸುದ್ದಿ ಕೇಳಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಖುಷಿಯಿಂದ ಕಣ್ಣೀರು ಹಾಕಿದ್ದಾರಂತೆ.
ಕಳೆದ ಒಂದು ತಿಂಗಳಿನಿಂದ ಎಸ್ ಆರ್ ಕೆ ಕುಟುಂಬ ಮಗನ ಚಿಂತೆಯಲ್ಲೇ ಕಳೆದುಹೋಗಿತ್ತು. ಇದೀಗ ನಿನ್ನೆಯಷ್ಟೇ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಈ ಸುದ್ದಿ ತಿಳಿದ ತಕ್ಷಣ ಶಾರುಖ್ ತಮ್ಮ ಲೀಗಲ್ ಟೀಂನೊಂದಿಗೆ ಖುಷಿಪಟ್ಟಿದ್ದಾರಂತೆ. ಅಲ್ಲದೆ, ಬಾಲಿವುಡ್ ಸ್ನೇಹಿತರು ಕರೆ ಮಾಡಿ ಶುಭಾಷಯ ಕೋರಿದಾಗ ಶಾರುಖ್, ಗೌರಿ ಭಾವುಕರಾಗಿ ಕಣ್ಣೀರು ಹಾಕಿದರು ಎಂದು ಮೂಲಗಳಿಂದ ತಿಳಿದುಬಂದಿದೆ.