ಹೌಸ್ ಫುಲ್ -4 ಚಿತ್ರದ ಕಲಾವಿದರಿಂದ ಸಹ ಕಲಾವಿದೆಗೆ ಲೈಂಗಿಕ ಕಿರುಕುಳ

ಶನಿವಾರ, 27 ಅಕ್ಟೋಬರ್ 2018 (07:35 IST)
ಮುಂಬೈ : ಮುಂಬೈನ ಫಿಲ್ಮ್ ಸ್ಟುಡಿಯೋದಲ್ಲಿ ಹೌಸ್ ಫುಲ್ -4 ಚಿತ್ರದ ಕಲಾವಿದರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಹ ಕಲಾವಿದೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಗುರುವಾರ ಸಂಜೆ ಚಿತ್ರಕೂಟ ಸ್ಟುಡಿಯೋದಲ್ಲಿ ಸಹ ಕಲಾವಿದೆ ತನ್ನ ಸ್ನೇಹಿತರ ಜೊತೆ ಕುಳಿತಿಕೊಂಡಿದ್ದಾಗ ಹೌಸ್ ಫುಲ್ -4 ಚಿತ್ರದ ಕಲಾವಿದರಾದ ಪವನ್ ಶೆಟ್ಟಿ, ಸಾಗರ್ ಜೊತೆ ಮತ್ತಿಬ್ಬರು ಆಕೆ ಕುಳಿತ ಜಾಗಕ್ಕೆ ಬಂದು ಆಕೆಯ ಸ್ನೇಹಿತರನ್ನು ಅಲ್ಲಿಂದ ಎಳೆದೊಯ್ಯುವ ಯತ್ನ ನಡೆಸಿದ್ದಾರಂತೆ. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪವನ್ ಶೆಟ್ಟಿ ನನ್ನ ಮೇಲೆ ಕೂಗಾಡಿದ್ದಲ್ಲದೆ ನನ್ನ ಖಾಸಗಿ ಅಂಗವನ್ನು ಮುಟ್ಟಿ ಕೆಟ್ಟದಾಗಿ ನಡೆದುಕೊಂಡಿದ್ದಾನಂತೆ.


ಈ ಘಟನೆಗೆ ಸಂಬಂಧಿಸಿದಂತೆ ಕಲಾವಿದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ  ನಾಲ್ವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಶಾಂತ್ ಸಂಬರಗಿ ಗೆ ಸಂಕಷ್ಟ; ಶೃತಿ ಹರಿಹರನ್ ನಿಂದ ಮತ್ತೊಂದು ದೂರು ದಾಖಲು